ಮುಲ್ಕಿ – ರಮ್ಜಾನ್ ಕಿಟ್ ವಿತರಣೆ

ಕಿನ್ನಿಗೋಳಿ: ಮುಲ್ಕಿ ಮುಸ್ಲಿಂ ಅಸೋಸಿಯೇಶನ್ ರಿಯಾಜ್ ಘಟಕ ಹಾಗೂ ಮುಲ್ಕಿ ಮಸೀದಿ ವತಿಯಿಂದ ಶನಿವಾರ ಅಂಗರಗುಡ್ಡೆ ಮಸೀದಿಯಲ್ಲಿ ರಮ್ಜಾನ್ ಉಪವಾಸದ ಪ್ರಯುಕ್ತ ೪೦ ಬಡ ಕುಟುಂಬಗಳಿಗೆ ಅಕ್ಕಿ ಬೇಳೆ ಕಾಳು ಸಹಿತ ವಿವಿಧ ಸಾಮಾಗ್ರಿಗಳ ರಮ್ಜಾನ್ ಕಿಟ್ ವಿತರಣೆ ನಡೆಯಿತು. ಅಂಗರಗುಡ್ಡೆ ಮಸೀದಿ ಖತೀಬ ಉಮ್ಮರ್ ಮದನಿ ದುವಾ ಪ್ರಾರ್ಥನೆ ಸಲ್ಲಿಸಿದರು. ಮುಲ್ಕಿ ಕೇಂದ್ರ ಜಮಾತ್ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಮನುಲ್ಲಾ, ಉಮ್ಮರ್ ಫಾರೂಕ್, ರಿಯಾಜ್ ಕಾರ್ನಾಡ್, ನಝೀರ್ ಎಮ್. ಎಚ್., ನಿಸಾರ್ ಅಹಮ್ಮದ್, ಅಜೀಝ್ ಅಂಗರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli23071301

Comments

comments

Leave a Reply

Read previous post:
Kinnigoli1907201301
ದೇವಳಕ್ಕೆ ಬೇಟಿ- ಕೆ. ಅಭಯಚಂದ್ರ ಜೈನ್

ಕಿನ್ನಿಗೋಳಿ: ಯುವಜನ ಸೇವೆ ಹಾಗೂ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಭಾನುವಾರ ಬೇಟಿ ನೀಡಿದರು. ದೇವಳದ ಆಡಳಿತ ಮೊಕ್ತೇಸರ ತೋಕೂರುಗುತ್ತು...

Close