ಪದ್ಮಶಾಲಿ ಮತ್ತು ವಿದ್ಯಾವರ್ಧಕ ಸಂಘ ಸಭೆ

 ಕಿನ್ನಿಗೋಳಿ: ನಮ್ಮ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿನ್ನೆಡೆಯಲ್ಲಿವೆ. ಅಲ್ಲದೇ ಸಮುದಾಯದ ಬೆನ್ನೆಲುಬಾದ ನೇಕಾರಿಕೆ ಇಂದು ಜಾಗತೀಕರಣದಿಂದಾಗಿ ನಲುಗಿ ಹೋಗುತ್ತಿದೆ. ಒಗ್ಗಟ್ಟಿನ ಬಲದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಸಮುದಾಯದ ಜನರಲ್ಲಿ ಎಲಾ ರೀತಿಯ ತಿಳುವಳಿಕೆ, ಸಹಾಯ ಮತ್ತು ಶಿಕ್ಷಣದ ಅರಿವು ಮೂಡಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ಜೆ.ಟಿ ರಾಧಾಕೃಷ್ಣ ಹೇಳಿದರು
ಭಾನುವಾರ ಕಿನ್ನಿಗೋಳಿ ನೇಕಾರ ಸೌಧ ಸಭಾ ಭವನದಲ್ಲಿ ನಡೆದ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ 67ನೇ ವಾರ್ಷಿಕ ಮಹಾಸಭೆ ಮತ್ತು ಪದ್ಮಶಾಲಿ ವಿದ್ಯಾವರ್ಧಕ ಸಂಘ 23ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್ ಮತ್ತು ದ.ಕ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕೆ. ವಿಠಲ ಶೆಟ್ಟಿಗಾರ್ ಕಾಟಿಪಳ್ಳ ಸಭಾಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ದಿ| ದಯಾನಂದ ಕೊಂಚಾಡಿ ಹಾಗೂ ವಿಮಲ ಡಿ. ಕೊಂಚಾಡಿ ಪ್ರಾಯೋಜಿತ ೨೦೧೨-೧೩ ನೇಸಾಲಿನ ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿಯನ್ನು ಬೈಲಕರೆ ಕೆ. ಗೋಪಾಲ ಶೆಟ್ಟಿಗಾರ್ ಉಡುಪಿ ಅವರಿಗೆ ನೀಡಿ ಪುರಸ್ಕಾರಿಸಲಾಯಿತು.
ರಾಷ್ಟ್ರಪತಿ ಸೇವಾ ಪದಕ ವಿಜೇತ ರುಕ್ಮಯ ಶೆಟ್ಟಿಗಾರ್, ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಪೂಜಾ ಶ್ರೀ ಹರಿಪದವು, ಉಪನ್ಯಾಸಕ ಜಯರಾಮ ಶೆಟ್ಟಿಗಾರ್, ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಉತ್ತಮ ನೇಕಾರರಾಗಿ ಬೋಜ ಶೆಟ್ಟಿಗಾರ್ ಸಸಿಹಿತ್ಲು, ಕೆ. ಸಂಜೀವ ಶೆಟ್ಟಿಗಾರ್ ಕೊರಂಗ್ರಪಾಡಿ ಉಡುಪಿ, ಭೋಜ ಶೆಟ್ಟಿಗಾರ್ ಕೆರೆಕಾಡು ಹಾಗೂ ವಿಠಲ ಶೆಟ್ಟಿಗಾರ್ ಮುದ್ರಾಡಿ ಅವರನ್ನು ಅಭಿನಂದಿಸಲಾಯಿತು.
ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘ ಮಹಿಳಾ ಬಳಗದ ಪ್ರಮುಖೆ ಸರೋಜಿನಿ ಹೆಚ್. ಶೆಟ್ಟಿಗಾರ್, ರಜತ ಮಹೋತ್ಸವ ಸಮಿತಿ ಮಹಿಳಾ ಬಳಗ ಅಧ್ಯಕ್ಷೆ ಮಧುಮತಿ ಬಿ., ಉಡುಪಿ ಎಂ.ಜಿ.ಎಂ ಕಾಲೇಜು ಉಪನ್ಯಾಸಕಿ ಪುಷ್ಪಲತಾ ಪಿ., ಬೆಂಗಳೂರು ದ.ಕ. ಪದ್ಮಶಾಲಿ ಸಮಾಜ ಸೇವಾ ಕೂಟ ಉಪಾಧ್ಯಕ್ಷ ಮಾಧವ ಶೆಟ್ಟಿಗಾರ್, ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಬಿ. ಶ್ರೀನಿವಾಸ ಶೆಟ್ಟಿಗಾರ್,
ಮಂಗಳೂರು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಮೊಕ್ತೇಸರ ದೀನದಾಸ್ ಶೆಟ್ಟಿಗಾರ್, ಸಾಲಿಕೇರಿ ಶ್ರೀ ವೀರಭದ್ರ -ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಸದಾಶಿವ ಎಸ್. ಶೆಟ್ಟಿಗಾರ್, ಕಲ್ಯಾಣಪುರ ಶ್ರೀ ಆದಿ ಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಕಾರ್ಯದರ್ಶಿ ಸಿ. ಪ್ರಭಾಕರ್, ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನ ಆಡಳಿತ ಮೊಕ್ತೇಸರ ಪ್ರಭಾಶಂಕರ್ ಪದ್ಮಶಾಲಿ, ಕಾಪು ಶ್ರೀ ವೀರಭದ್ರ ದೇವಸ್ಥಾನ ಆಡಳಿತ ಮೊಕ್ತೇಸರ ಈಶ್ವರ ಎನ್. ಶೆಟ್ಟಿಗಾರ್, ಪಡುಬಿದ್ರಿ ಶ್ರೀ ವೀರಭದ್ರ ದೇವಸ್ಥಾನ ಆಡಳಿತ ಮೊಕ್ತೇಸರ ರಾಘು ಶೆಟ್ಟಿಗಾರ್, ಎರ್ಮಾಳು ಶ್ರೀ ಆದಿ ಶಕ್ತಿ ವೀರಭದ್ರ ದೇವಸ್ಥಾನ ಆಡಳಿತ ಮೊಕ್ತೇಸರ ರಾಮ ಶೆಟ್ಟಿಗಾರ್, ಕಾರ್ಕಳ ಶ್ರೀ ಆದಿ ಶಕ್ತಿ ವೀರಭದ್ರ ದೇವಸ್ಥಾನ ಆಡಳಿತ ಮೊಕ್ತೇಸರ ಕೆ ಜನಾರ್ಧನ ಶೆಟ್ಟಿಗಾರ್, ಮುಲ್ಕಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಗುರಿಕಾರ ಚಂದಪ್ಪಗುರಿಕಾರ್, ಹಳೆಯಂಗಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಅಧ್ಯಕ್ಷ ಪೀತಾಂಬರ ತುಂಗಾ ಶೆಟ್ಟಿಗಾರ್, ಸುರತ್ಕಲ್ ಶ್ರೀ ಮಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರ ಚಂದಪ್ಪ ಗುರಿಕಾರ್, ಸಿದ್ಧಕಟ್ಟೆ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಮೊಕ್ತೇಸರ ಚಂದ್ರಹಾಸ ಗುರಿಕಾರ್, ಉಳ್ಳಾಲ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಯು. ಐತಪ್ಪ ಶೆಟ್ಟಿಗಾರ್, ಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಕಲ್ಯಾಣ ಮಂಟಪ ನಿರ್ಮಾಣ ಸಮಿತಿಯ ಹರೀಶ್ ಬಡಾಜೆ, ಕಾಂಞಂಗಾಡು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಆಡಳಿತ ಮೊಕ್ತೇಸರ ಆರ್. ದೇವರಾಯ, ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ ಕಾರ್ಯದರ್ಶಿ ಪಿ.ಆರ್ ಭವಾನಿಶಂಕರ್ ಕಾಟಿಪಳ್ಳ ಜೊತೆ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ್ ಸಾಸ್ತಾನ, ಕೋಶಾಧಿಕಾರಿ ಚಂದ್ರಾವತಿ, ಪದ್ಮಶಾಲಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಪದ್ಮಶಾಲಿ ಕೊಣಾಜೆ, ಕಾರ್ಯದರ್ಶಿ ಸಂತೋಷ್ ಸಗ್ರಿ, ಜೊತೆ ಕಾರ್ಯದರ್ಶಿ ಶಿವಾನಂದ ಎಂ ಶೆಟ್ಟಿಗಾರ್, ಕೋಶಾಧಿಕಾರಿ ಪುಂಡಲೀಕ ಶೆಟ್ಟಿಗಾರ್ ಉಪಸ್ಥಿತರಿದ್ದರು.

Kinnigoli23071309

Kinnigoli23071310

Comments

comments

Leave a Reply

Read previous post:
Kinnigoli23071308
ಕಿನ್ನಿಗೋಳಿ ನುಗ್ಗೆ ಕೃಷಿ ತರಬೇತಿ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯು ಗ್ರಾಮೀಣ ಜನರ ಅಭ್ಯುದಯಕ್ಕಾಗಿ ಸ್ವಾವಲಂಬನೆಯ ಮೂಲಕ ಅದಾಯ ವೃದ್ಧಿಸುವ ಕೆಲಸಕ್ಕೆ ಪ್ರೇರಣೆ ನೀಡಿ ಸ್ವ ಸಹಾಯ ಸಂಘಗಳ ಕೃಷಿ ಅಭಿವೃದ್ಧಿ,...

Close