ಕಿನ್ನಿಗೋಳಿ ವನಮಹೋತ್ಸವ ಆಚರಣೆ

ಕಿನ್ನಿಗೋಳಿ: ಸಕಲ ಜೀವ ಸಂಕುಲಗಳ ಉಳಿವಿಗೆ ಮೂಲಾಧಾರವಾದ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯಗಾರವನ್ನು ವಿದ್ಯಾರ್ಥಿಗಳು ಎಳವೆಯಲ್ಲಿಯೇ ಅರಿಯಬೇಕು. ಹಸಿರು ಸಸ್ಯದಿಂದ ಆರೋಗ್ಯಪೂರ್ಣ ಪರಿಸರ ಸಾಧ್ಯ ಅವುಗಳನ್ನು ನಮ್ಮ ಸಹಜೀವಿಗಳೆಂದು ಪರಿಗಣಿಸಿ ಗಿಡಗಳನ್ನು ನೆಟ್ಟು ಪ್ರಕೃತಿಗೆ ಜೀವತುಂಬುವ ಪ್ರಯತ್ನ ಮಾಡಬೇಕು ಎಂದು ಕಿನ್ನಿಗೋಳಿ ಮೇರಿವೆಲ್ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಸಗಾಯ ಸೆಲ್ವಿ ಹೇಳಿದರು.
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ವನಮಹೋತ್ಸವ ಆಚರಣೆ ಸಂದರ್ಭ ಮಾತನಾಡಿದರು.
ವಿದ್ಯಾರ್ಥಿನಿಯರು “ಸಹಬಾಳ್ವೆಯಿಂದ ಸಮೃದ್ಧ ಜೀವನ” ಎಂಬ ಕಿರು ನಾಟಕ ಅಭಿನಯಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ, ಶಾಲಾ ಶಿಕ್ಷಕಿಯರಾದ ಸೆಲಿನ್, ಜ್ಯೋತಿ, ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 23071301

Kinnigoli-23071302

Kinnigoli-23071303

Kinnigoli-23071304

Comments

comments

Leave a Reply

Read previous post:
Kinnigoli23071310
ಪದ್ಮಶಾಲಿ ಮತ್ತು ವಿದ್ಯಾವರ್ಧಕ ಸಂಘ ಸಭೆ

 ಕಿನ್ನಿಗೋಳಿ: ನಮ್ಮ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿನ್ನೆಡೆಯಲ್ಲಿವೆ. ಅಲ್ಲದೇ ಸಮುದಾಯದ ಬೆನ್ನೆಲುಬಾದ ನೇಕಾರಿಕೆ ಇಂದು ಜಾಗತೀಕರಣದಿಂದಾಗಿ ನಲುಗಿ ಹೋಗುತ್ತಿದೆ. ಒಗ್ಗಟ್ಟಿನ ಬಲದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಸಮುದಾಯದ...

Close