ಪೊಂಪೈ- ವಾಣಿಜ್ಯ ಶಾಸ್ತ್ರ ತರಗತಿ ಆರಂಭ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಳಿಸುವ ಸದಾವಾಕಾಶ ಲಭಿಸಿದ್ದು ಭವಿಷ್ಯವನ್ನು ರೂಪಿಸಲು ಸಹಾಯವಾಗಲಿ ಎಂದು ಪೊಂಪೈ ಕಾಲೇಜು ಸಂಚಾಲಕ ಫಾ| ಪೌಲ್ ಪಿಂಟೊ ಹೇಳಿದರು.
ಐಕಳ ಪೊಂಪೈ ಕಾಲೇಜಿನಲ್ಲಿ ಮಂಗಳವಾರ ನಡೆದ ಪೊಂಪೈ ಕಾಲೇಜು ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ಪದವಿಯ ಪ್ರಥಮ ಬ್ಯಾಚಿನ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಪೆಟ್ರಿಕ್ ಮಿನೇಜಸ್, ಶಿಕ್ಷಕ ರಕ್ಷಕ ಸಂಘ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಹಿರಿಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಶರತ್ ಶೆಟ್ಟಿ ಮತ್ತು ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಫಾ| ಜೆರೊಮ್ ಡಿಸೋಜ ಉಪಸ್ಥಿತರಿದ್ದರು.
ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಶೆಟ್ಟಿ ವಂದಿಸಿದರು. ಉಪನ್ಯಾಸಕ ಪ್ರದೀಪ್ ಕಾರ್ಯಕ್ರಮ ನಿರ್ವಹಿಸಿದರು.

Kinnigoli-27071301

Comments

comments

Leave a Reply

Read previous post:
Kinnigoli-23071306
ಬ್ಯಾಂಕ್ ಆಫ್ ಬರೋಡ- ರೋಕಿ ಪಿಂಟೊ ಸನ್ಮಾನ

ಕಿನ್ನಿಗೋಳಿ: ಬ್ಯಾಂಕ್ ಆಫ್ ಬರೋಡದ 106 ನೇ ಸ್ಥಾಪಕ ದಿನಾಚರಣೆಯನ್ನು ಕಿನ್ನಿಗೋಳಿ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಶನಿವಾರ ಆಚರಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿಯ ಉದ್ಯಮಿ ರೋಕಿ...

Close