ನೇಜಿ ನೆಟ್ಟ NSS ಸ್ವಯಂ ಸೇವಕರು

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಪ್ರಮುಖ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ಪ್ರತ್ಯಕ್ಷವಾಗಿ ತೊಡಗಿಸಿಕೊಳ್ಳುವ ಮೂಲಕ ಪೊಂಪೈ ಕಾಲೇಜಿನ 35 ಎನ್. ಎಸ್. ಎಸ್. ಸ್ವಯಂ ಸೇವಕರು ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಕೃಷಿಯ ಮಹತ್ವದ ಬಗ್ಗೆ ಅರಿತು ಯುವಜನರಿಗೆ ಮಾದರಿಯಾದರು. ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪಟ್ಟೆ ಗ್ರಾಮದ ರಾಜೇಶ್ ಕೋಟ್ಯಾನ್, ರಾಧಮ್ಮ ನಿವಾಸ ಪಟ್ಟೆದೋಟ ಹೌಸ್ ಅವರಿಗೆ ಸೇರಿದ ಗದ್ದೆಯಲ್ಲಿ ವಿದ್ಯಾರ್ಥಿಗಳು ನೇಜಿಯನ್ನು ನೆಟ್ಟು ಆ ಕುಟುಂಬದ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಿದರು.

ಕಾಲೇಜು ಪ್ರಿನ್ಸಿಪಾಲ್ ಡಾ|| ಜೋನ್ ಕ್ಲಾರೆನ್ಸ್ ಮಿರಾಂದ, ಉಪನ್ಯಾಸಕರಾದ ಡಾ|| ಇ. ವಿಕ್ಟರ್ ವಾಝ್, ಪ್ರೊ. ಯೋಗೀಂದ್ರ ಬಿ., ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ|| ಎಸ್. ಗುಣಕರ, ಎನ್ ಸಿ ಸಿ ನಾಯಕಿ ಚೈತ್ರಾ ಹಾಗೂ ಎನ್ ಎಸ್ ಎಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.

Kinnigoli-27071302

Comments

comments

Leave a Reply

Read previous post:
Kinnigoli-27071301
ಪೊಂಪೈ- ವಾಣಿಜ್ಯ ಶಾಸ್ತ್ರ ತರಗತಿ ಆರಂಭ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಳಿಸುವ ಸದಾವಾಕಾಶ ಲಭಿಸಿದ್ದು ಭವಿಷ್ಯವನ್ನು ರೂಪಿಸಲು ಸಹಾಯವಾಗಲಿ ಎಂದು ಪೊಂಪೈ ಕಾಲೇಜು ಸಂಚಾಲಕ ಫಾ| ಪೌಲ್ ಪಿಂಟೊ ಹೇಳಿದರು. ಐಕಳ...

Close