ರೋಟರಾಕ್ಟ್ – ಪದಾಧಿಕಾರಿಗಳ ಪದಗ್ರಹಣ

ಕಿನ್ನಿಗೋಳಿ: ಯುವಕರು ಸೇವಾ ಸಂಘ ಸಂಸ್ಥೆಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಯುವಜನ ಸೇವಾ ಹಾಗೂ ಮೀನುಗಾರಿಕಾ ಮತ್ತು ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಬಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಪ್ರವರ್ತಿತ ರೋಟರಾಕ್ಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ರಜತ ವರ್ಷದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಪದಗ್ರಹಣ ಅಧಿಕಾರಿ ಕಿನ್ನಿಗೋಳಿ ರೋಟರಿ ನಿಕಟ ಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ನೂತನ ಅಧ್ಯಕ್ಷ ಪ್ರಣೀಲ್ ಹೆಗ್ಡೆ, ಕಾರ್ಯದರ್ಶಿ ಪುಷ್ಪರಾಜ್ ಆಚಾರ್ಯ ಹಾಗೂ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿದರು. ನಿಟ್ಟೆ ಕೆ.ಎಸ್.ಹೆಗ್ಡೆ ಇನ್ಸ್‌ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಜಸ್ಟಿಸ್ ಡಾ| ಸುಧೀರ್ ರಾಜ್ ಕೆ. ದಿಕ್ಸೂಚಿ ಭಾಷಣ ನೀಡಿದರು.
ಪ್ರತಿಭಾವಂತ ಇಂಟರ‍್ಯಾಕ್ಟ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪರಿಸರದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಅಂಗವಿಕಲ ಶೈಲೇಶ್ ಅವರಿಗೆ ಗಾಲಿಕುರ್ಚಿ ವಿತರಣೆ ಹಾಗೂ ಯೋಗ ಗುರು ಜಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜ್ಯೋತಿ ಕೆಂಚನಕೆರೆ, ದೀಕ್ಷೀತ್, ಸಾಗರ್ ಅವರನ್ನು ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.
ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಕೆ. ಆರ್. ರಾಜೀವ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕೆನರಾ ವಲಯ ಪ್ರತಿನಿಧಿ ಸುರಕ್ಷಾ ರೈ, ಮಾಜಿ ಸಭಾಪತಿ ಜೆರಾಲ್ಡ್ ಮಿನೇಜಸ್, ನೂತನ ಸಭಾಪತಿ ಜೊಸ್ಸಿ ಪಿಂಟೊ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ರಾಜೇಶ್ ಕೆಂಚನಕೆರೆ ಸ್ವಾಗತಿಸಿದರು, ಮಾಜಿ ಕಾರ್ಯದರ್ಶಿ ಅಶೋಕ್ ಎಸ್. ವಾರ್ಷಿಕ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಪುಷ್ಪರಾಜ್ ಆಚಾರ್ಯ ವಂದಿಸಿದರು ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-27071302

Comments

comments

Leave a Reply

Read previous post:
Kinnigoli-27071301
ಶಿಕ್ಷಕರ ನೇಮಕಕ್ಕೆ ಕ್ರಮ: ಅಭಯಚಂದ್ರ

Prakash Suvarna ಮುಲ್ಕಿ: ಸರಕರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ ಶಿಕ್ಷಕರ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಗುವುದು ಎಂದು ಯುವಜನ ಸಚಿವ ಅಭಯಚಂದ್ರ ಹೇಳಿದ್ದಾರೆ.  ಅವರು...

Close