ಶಿಕ್ಷಕರ ನೇಮಕಕ್ಕೆ ಕ್ರಮ: ಅಭಯಚಂದ್ರ

Prakash Suvarna

ಮುಲ್ಕಿ: ಸರಕರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ ಶಿಕ್ಷಕರ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಗುವುದು ಎಂದು ಯುವಜನ ಸಚಿವ ಅಭಯಚಂದ್ರ ಹೇಳಿದ್ದಾರೆ.

 ಅವರು ಸುಮಾರು 77 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೆಎಸ್‌ರಾವ್ ನಗರದ ನೂತನ ಪ್ರೌಢಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದರು. 16 ತಿಂಗಳ ಒಳಗಡೆ ಕಟ್ಟಡ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ,ದಾನಿಗಳ, ಶಾಲಾಭಿವೃಧ್ದಿ ಸಮಿತಿಯಿಂದ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ನ.ಪಂ. ಮಾಜೀ ಅಧ್ಯಕ್ಷ ಬಿಎಂ ಆಸೀಫ್, ಉದ್ಯಮಿ ಪ್ರಭಾಕರ ಬುನಿಯಾನ್, ಪಯ್ಯೊಟ್ಟು ಸದಾಶಿವ ಸಾಲಿಯಾನ್, ನ.ಪಂ. ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲಿಯಾನ್, ನ.ಪಂ. ಸದಸ್ಯೆ ವಿಮಲಾಪೂಜಾರಿ, ಶಾಲಾಭಿವೃದ್ದಿ ಸಮಿತಿಯ ಸದಾನಂದ ಸುವರ್ಣ, ವಸಂತ ಬೆರ್ನಾಡ್, ಗುತ್ತಿಗೆದಾರ ಶ್ರೀಧರ, ಶಾಲಾ ಮುಖ್ಯೋಪಾಧ್ಯಾಯಿನಿ ಸುಮತಿಬಾಯಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ವಿನಯಾ ಸ್ವಾಗತಿಸಿ ವಂದಿಸಿದರು.

Kinnigoli-27071301

Comments

comments

Leave a Reply

Read previous post:
Kinnigoli-27071302
ನೇಜಿ ನೆಟ್ಟ NSS ಸ್ವಯಂ ಸೇವಕರು

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಪ್ರಮುಖ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ಪ್ರತ್ಯಕ್ಷವಾಗಿ ತೊಡಗಿಸಿಕೊಳ್ಳುವ ಮೂಲಕ ಪೊಂಪೈ ಕಾಲೇಜಿನ 35 ಎನ್. ಎಸ್. ಎಸ್. ಸ್ವಯಂ ಸೇವಕರು ಗದ್ದೆಯಲ್ಲಿ ನೇಜಿ...

Close