ಕಾಳಿಕಾಂಬಾ ಮಹಿಳಾ ವೃಂದ : ಆಟಿ ಆಚರಣೆ

ಕಿನ್ನಿಗೋಳಿ: ಆಟಿ ಆಚರಣೆ ಕೇವಲ ನೆನಪಿನ ಆಚರಣೆ ಆಗಬಾರದು. ಯುವ ಜನಾಂಗಕ್ಕೆ ಸಂಸ್ಕಾರಯುತ ಶಿಕ್ಷಣ ಕಲ್ಪಿಸಿಕೊಡಬೇಕು. ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವ ಈ ಕಾಲಘಟ್ಟದಲ್ಲಿ ಸಮಾಜದ ಉತ್ತಮ ಕಟ್ಟು ಕಟ್ಟಳೆಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ ಹೇಳಿದರು.
ಕಿನ್ನಿಗೋಳಿ ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನದಲ್ಲಿ ಶನಿವಾರ ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಆಯೋಜಿಸಿದ “ಆಟಿ ಆಚರಣೆ”ಯಲ್ಲಿ ಚೆನ್ನೆ ಮಣೆ ಆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ ಉಪಸ್ಥಿತರಿದ್ದರು.
ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಅಧ್ಯಕ್ಷೆ ರತ್ನ ಪ್ರಭಾಕರ್ ಸ್ವಾಗತಿಸಿ, ವಾಣಿಗೋಪಾಲ್ ವಂದಿಸಿದರು. ಅನಿತಾ ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-28071303

Kinnigoli-28071304

Kinnigoli-28071305

Comments

comments

Comments are closed.

Read previous post:
Kinnigoli-28071302
ಕಟೀಲು- ಭಾರತೀಯ ಅಂಚೆ ಕಾರ್ಯದರ್ಶಿ ಭೇಟಿ

ಕಿನ್ನಿಗೋಳಿ: ಭಾರತೀಯ ಅಂಚೆ ಇಲಾಖಾ ಕಾರ್ಯದರ್ಶಿ ಪದ್ಮಿನಿ ಗೋಪಿನಾಥ್ ಹಾಗೂ ಬೆಂಗಳೂರು ಅಂಚೆ ಇಲಾಖೆಯ (ಪಿ.ಎಮ್.ಜಿ.) ಅರುಂದತಿ ಘೋಷ್ ಕಟೀಲು ದೇವಳಕ್ಕೆ ಭೇಟಿ ನೀಡಿದರು. ಮಂಗಳೂರಿಗೆ ಪ್ರಾದೇಶಿಕ ಕಛೇರಿಯನ್ನು...

Close