ಸಚ್ಚಾರಿತ್ರ್ಯದ ಸಂಸ್ಕಾರದಿಂದ ಜಗತ್ತನ್ನು ಗೆಲ್ಲಬೇಕು

ಕಿನ್ನಿಗೋಳಿ: ಸಚ್ಚಾರಿತ್ರ್ಯದ ಸಂಸ್ಕಾರವನ್ನು ಬೆಳೆಸಿಕೊಂಡು ಜಗತ್ತನ್ನು ಗೆಲ್ಲಬೇಕು. ದೇಶಭಕ್ತಿಯ ಜತೆಗೆ ಪರಿಸರದ ಪ್ರೀತಿ, ಕಾಳಜಿ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಬರಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಐಕಳ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಹಣ್ಣು ಹಂಪಲುಗಳ ಗಿಡಗಳು ಮತ್ತು ತರಕಾರಿ ಬೀಜಗಳನ್ನು ವಿತರಿಸಿ ಮಾತನಾಡಿದರು.
ಕ್ರೀಡಾಂಗಣದ ಸಮಸ್ಯೆ, ಡಿಸೆಂಬರ್ ನಂತರ ನೀರಿನ ಸಮಸ್ಯೆ ಹಾಗೂ ಶಾಲೆಗೆ ಕಂಪ್ಯೂಟರ್ ಸಾಧನಗಳ ಬೇಡಿಕೆ ಬಗ್ಗೆ ಕೇಂದ್ರಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ್ ಸಂಸದರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಉಪಸ್ಥಿತರಿದ್ದರು.

Kinnigoli-28071306

Kinnigoli-28071307

Kinnigoli-28071308

Comments

comments

Comments are closed.

Read previous post:
Kinnigoli-28071305
ಕಾಳಿಕಾಂಬಾ ಮಹಿಳಾ ವೃಂದ : ಆಟಿ ಆಚರಣೆ

ಕಿನ್ನಿಗೋಳಿ: ಆಟಿ ಆಚರಣೆ ಕೇವಲ ನೆನಪಿನ ಆಚರಣೆ ಆಗಬಾರದು. ಯುವ ಜನಾಂಗಕ್ಕೆ ಸಂಸ್ಕಾರಯುತ ಶಿಕ್ಷಣ ಕಲ್ಪಿಸಿಕೊಡಬೇಕು. ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವ ಈ ಕಾಲಘಟ್ಟದಲ್ಲಿ ಸಮಾಜದ ಉತ್ತಮ ಕಟ್ಟು ಕಟ್ಟಳೆಗಳನ್ನು...

Close