ಕಿನ್ನಿಗೋಳಿ ಯಕ್ಷಗಾನ ತಾಳಮದ್ದಲೆ ಸಪ್ತಾಹ

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಪ್ರಜ್ಞೆ ಮತ್ತು ಪುರಾಣ ಜ್ಞಾನವನ್ನು ಹೆಚ್ಚಿಸುವ ಅಚ್ಚ ಕನ್ನಡದ ಯಕ್ಷಗಾನ ತಾಳಮದ್ದಲೆಯನ್ನು ಮೂಲ ಸ್ವರೂಪದಲ್ಲೇ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ’ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು ಹೇಳಿದರು.

ಯಕ್ಷಲಹರಿ, ಯುಗಪುರುಷ ಕಿನ್ನಿಗೋಳಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿ, ಕರ್ನಾಟಕ ಸರಕಾರ, ಬೆಂಗಳೂರು ಇವರ ಸಹಯೋಗದಲ್ಲಿ ಮತ್ತು ಕರ್ಣಾಟಕ ಬ್ಯಾಂಕ್(ಲಿ) ಮಂಗಳೂರು ಪ್ರಾಯೋಜಕತ್ವದಲ್ಲಿ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ನಡೆದ ಯಕ್ಷಗಾನ ತಾಳಮದ್ದಲೆ ಸಪ್ತಾಹ “ಸಾಹಸೇ ಶ್ರೀಃ ಪ್ರತಿವಸತಿ” ಉದ್ಘಾಟಿಸಿ ಮಾತನಾಡಿದರು.

ಕರಾವಳಿಯ ಯಕ್ಷಗಾನ ಮಹತ್ವದ ಕಲಾ ಪ್ರಕಾರ. ಅದು ಇಂದಿಗೂ ಘನತೆ ಉಳಿಸಿಕೊಂಡಿದೆ. ಮಾತುಗಾರಿಕೆಯಲ್ಲೇ ಅದ್ಭುತ ಲೋಕ ಸೃಷ್ಟಿಸುವ ತಾಳಮದ್ದಳೆಯಂತಹ ಕಲೆ ಜಗತ್ತಿನಲ್ಲಿ ಬೇರಾವುದೂ ಇಲ್ಲ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದು ಮಾತನಾಡಿದರು.
ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕೆ. ಮೋಹನದಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕ.ಸಾಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಅತ್ತೂರು ಬೈಲು ವೆಂಕಟರಾಜ ಉಡುಪ ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಮಂಜುನಾಥ ಮಲ್ಯ, ಐಕಳ ಕರ್ಣಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಸದಾನಂದ ಎಸ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಶಾಖಾ ಪ್ರಬಂಧಕ ರಮೇಶ್ ಬಿ., ವಿಜಯಾ ಬ್ಯಾಂಕ್ ಶಾಖಾ ಪ್ರಬಂಧಕ ಶಿವಪ್ರಸಾದ್, ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಶಾಖಾ ಪ್ರಬಂಧಕ ಬಿ.ಕೆ ಕುಮಾರ್, ಯಕ್ಷಲಹರಿ ಉಪಾಧ್ಯಕ್ಷ ಪಿ. ಸತೀಶ್ ರಾವ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೃಷ್ಣ ಸಾಲಿಯಾನ್ ಉಪಸ್ಥಿತರಿದ್ದರು.
ಯಕ್ಷ ಲಹರಿಯ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ ಡಿ. ಎಸ್. ವಂದಿಸಿದರು. ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-29071302

Comments

comments

Comments are closed.

Read previous post:
Kinnigoli-29071301
ಕಿನ್ನಿಗೋಳಿ: ದಿ.ಕೊ.ಅ.ಉಡುಪ ಪ್ರಶಸ್ತಿ ಪ್ರದಾನ

ಕಿನ್ನಿಗೋಳಿ: ಕನ್ನಡ ಸಂಸ್ಕೃತಿಯನ್ನೇ ಉಸಿರನ್ನಾಗಿಸಿದರೇ ಮಾತ್ರ ಕನ್ನಡ ಉಳಿಯಬಹುದು. ಇದರ ಸತ್ವನ್ನು ಅರಿಯಲು ಅಧ್ಯಯನಶೀಲರಾಗಿ ಯುವಸಾಹಿತಿಗಳು ಬೆಳೆಯಬೇಕು. ವಿಶ್ವಮುಖಿಯಾಗಿ ಬೆಳೆದಿರುವ ಕನ್ನಡ ಭಾಷೆಯು ಈಜಿಪ್ಟ್‌ನ ಹರಗಡದ ಪ್ರದೇಶದಲ್ಲಿ ಅಲೆಗ್ಜಾಂಡರ್...

Close