ಕಿನ್ನಿಗೋಳಿ: ದಿ.ಕೊ.ಅ.ಉಡುಪ ಪ್ರಶಸ್ತಿ ಪ್ರದಾನ

ಕಿನ್ನಿಗೋಳಿ: ಕನ್ನಡ ಸಂಸ್ಕೃತಿಯನ್ನೇ ಉಸಿರನ್ನಾಗಿಸಿದರೇ ಮಾತ್ರ ಕನ್ನಡ ಉಳಿಯಬಹುದು. ಇದರ ಸತ್ವನ್ನು ಅರಿಯಲು ಅಧ್ಯಯನಶೀಲರಾಗಿ ಯುವಸಾಹಿತಿಗಳು ಬೆಳೆಯಬೇಕು.
ವಿಶ್ವಮುಖಿಯಾಗಿ ಬೆಳೆದಿರುವ ಕನ್ನಡ ಭಾಷೆಯು ಈಜಿಪ್ಟ್‌ನ ಹರಗಡದ ಪ್ರದೇಶದಲ್ಲಿ ಅಲೆಗ್ಜಾಂಡರ್ ಕ್ರಿ.ಪೂ. ಎರಡನೇ ಶತಮಾನದಲ್ಲಿಯೇ ಹುಟ್ಟಿದ ಕುರಹು ಇಂದಿಗೂ ಅಜರಾಮರವಾಗಿದೆ. ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕು, ಕನ್ನಡವನ್ನು ಸಾಹಿತ್ಯದ ಮೂಲಕ ಪಸರಿಸಲು ಕಿನ್ನಿಗೋಳಿ ಗ್ರಾಮೀಣ ಪ್ರದೇಶದಲ್ಲಿ ದಿ.ಕೊ.ಅ.ಉಡುಪರ ಸಾಧನೆ ಮೆಚ್ಚುವಂತದ್ದು ಕನ್ನಡವು ಜ್ಞಾನ, ವಿಜ್ಞಾನ, ಯೋಗ ಶಿಕ್ಷಣದ ಜೊತೆಗೆ ಬೆಳೆದಿದೆ ಸಂಸ್ಕಾರದ ಸಾಧ್ಯತೆಗೆ ಕನ್ನಡ ನಾಡು ನುಡಿ ವಿಶೇಷತೆಯನ್ನು ಹೊಂದಿದೆ. ಎಂದು ಬೆಂಗಳೂರಿನ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಬುಧವಾರ ವರ್ಷಂಪ್ರತಿ ನೀಡಲ್ಪಡುವ ಯುಗಪುರುಷದ ಸಂಸ್ಥಾಪಕ ದಿ.ಕೊ.ಅ.ಉಡುಪ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವಾರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಾಹಿತ್ಯವನ್ನು ಪ್ರೋತ್ಸಾಹಿಸುವ ಮನೋಭಾವನೆ ಯುಗಪುರುಷದಂತಹ ಪತ್ರಿಕೆಗಳು ವೇದಿಕೆಯನ್ನು ನೀಡಿದ್ದರಿಂದ ಹಿರಿಯ ಕಿರಿಯ ಸಾಹಿತಿಗಳು ಬೆಳಕಿಗೆ ಬಂದಿದ್ದಾರೆ. ಎಂದರು.
ವೇದ ವಿದ್ವಾಂಸರ ನೆಲೆಯಲ್ಲಿ ಬೆಳ್ಮಣ್ಣಿನ ವಾಸುದೇವ ತಂತ್ರಿಯವರನ್ನು ಕಟೀಲು ದೇವಳದ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಗೌರವಿಸಿದರು.
ಸಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ ಸಾಹಿತ್ಯದ ಭಾಷೆಯಿಂದಲೂ ಕ್ರಾಂತಿಯನ್ನು ಮಾಡುವ ಚಿಂತನೆಯಿಂದಲೇ ಇಂದು ಸಾಹಿತಿಗಳಿಗೆ ವಿಶೇಷ ಸ್ಥಾನಮಾನವಿದೆ. ಯುಗಪುರುಷ ಸಂಸ್ಥೆಯನ್ನು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ಕೆಲಸ ನಡೆಯಬೇಕಾಗಿದೆ, ದಿ.ಕೊ.ಅ.ಉಡುಪರು ಸಂಸ್ಥೆಯನ್ನು ಭದ್ರಬುನಾದಿಯಿಂದಲೇ ಸ್ಥಾಪಿಸಿದ್ದರಿಂದ ಇಂದು ಸಮಾಜದಲ್ಲಿ ಸಧೃಢವಾಗಿ ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಿದರು.
ಪರಿಸರದ ಪ್ರಾಥಮಿಕ ಶಾಲೆಯ ಬರವಣಿಗೆಯಲ್ಲಿನ ಪ್ರತಿಭೆಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ವಿತರಿಸಲಾಯಿತು.
ಯುಗಪುರುಷ ಪ್ರಕಟಣಾಲಯದ ಪ್ರಕಟಿತ ಹಿರಿಯ ಸಾಹಿತಿ ಕೆ.ಜಿ.ಮಲ್ಯರವರು ಪಳಕಳ ಸೀತಾರಾಮ ಭಟ್‌ರವರ “ಕತ್ತಲ ರಾಜ್ಯ ಹಾರುವ ಪ್ರಜೆಗಳು” ಹಾಗೂ ಕುಂದಾಪುರದ ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈರವರು ಬಿಣಗಾ ಅನಂತ ಚಿಂತಾಮಣಿ ಜ್ಯೋತಿಷಿ ರಚಿಸಿರುವ “ಮಕ್ಕಳಿಗಾಗಿ ಕಥೆಗಳು” ಎಂಬ ಕೃತಿಯನ್ನು ಅನಾವರಣಗೊಳಿಸಿದರು. ಹಿರಿಯ ಸಾಹಿತ್ಯದ ಸಂಘಟಕ ಕೆ.ಪಿ.ಮಲ್ಯ ಮಂಗಳೂರುರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ದಿ.ಕೊ.ಅ.ಉಡುಪರ ಸಂಸ್ಮರಣೆಯನ್ನು ನಿವೃತ್ತ ಉಪನ್ಯಾಸಕ ಶಿವಾನಂದ ಕಾರಂತ ಕುಂದಾಪುರ ಮಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಹಿರಿಯ ಸಾಹಿತಿ ಕೆ.ಜಿ.ಮಲ್ಯ, ಅನಂತ ಉಡುಪ, ಪದ್ಮನಾಭ ಉಡುಪ, ಉಪಸ್ಥಿತರಿದ್ದರು.
ಎಳತ್ತೂರು ಶ್ರೀನಿವಾಸ ಭಟ್ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಲಕ್ಷ್ಮೀ ಸ್ವಯಂವರ ಅಮೃತೋದ್ಭವ ಹಾಗೂ ಸಭಾ ಕಾರ್ಯಕ್ರಮದ ನಂತರ ಶ್ರೀನಿವಾಸ ಕಲ್ಯಾಣ ಯುಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಕ್ಯಾಪ್ಷನ್
ಕಿನ್ನಿಗೋಳಿಯ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪ ಪ್ರಶಸ್ತಿಯನ್ನು ಬುಧವಾರ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರವರಿಗೆ ಸಂಸದ ನಳಿನ್‌ಕುಮಾರ್ ಕಟೀಲು ನೀಡಿ ಗೌರವಿಸಿದರು.

Kinnigoli-29071301

 

Comments

comments

Comments are closed.

Read previous post:
Kinnigoli-28071315
ನಿಡ್ಡೋಡಿ ವಿದ್ಯುತ್ ಸ್ಥಾವರ ಪ್ರತಿಭಟನೆ

ಕಿನ್ನಿಗೋಳಿ : ತದಡಿಯಲ್ಲಿ ಅನಿಲ ವಿದ್ಯುತ್ ಉತ್ಪಾದನಾ ಘಟಕ ಆರಂಭವಾಗುವ ಸುದ್ದಿ ಒಂದು ಕಡೆಯಾದರೆ ಇತ್ತ ಇನ್ನೊಂದು ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಕರಾವಳಿ ಪ್ರದೇಶಕ್ಕೆ ಕಾಲಿಡುವುದು ಆತಂಕದ...

Close