ನಿಡ್ಡೋಡಿ ಸ್ಥಳ ವೀಕ್ಷಣೆಗೆ ಗ್ರಾಮಸ್ಥರ ತಡೆ

ನಿಡ್ಡೋಡಿ : ಬಂಗೇರಪದವುನಲ್ಲಿ ಸೋಮವಾರ ಬೆಳಗ್ಗೆದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ತಂಡ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ ವೀಕ್ಷಣೆ ಹಾಗೂ ನಿಡ್ಡೋಡಿ ಪರಿಸರದ ವಸ್ತು ಸ್ಥಿತಿಯನ್ನು ಆಳ ಅಧ್ಯಯನ ನಡೆಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ವರದಿ ಸಲ್ಲಿಸಲು ಮಾದ್ಯಮ ಪ್ರತಿನಿಧಿಗಳೊಂದಿಗೆ ತೆರಳಿದಾಗ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲದ ಸ್ಥಳೀಯ ಗ್ರಾಮಸ್ಥರು ತಡೆಯೊಡ್ಡಿ ಪ್ರತಿಭಟನೆ ನಡೆಸಿ ತಂಡವನ್ನು ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ.

ಕಾಂಗ್ರೆಸ್ ಮುಖಂಡರು ಗ್ರಾಮಸ್ಥರನ್ನು ಎಷ್ಟೇ ಸಮಾಧಾನ ಮಾಡಿದರೂ, ಅಕ್ರೋಶಗೊಂಡ ಗ್ರಾಮಸ್ಥರು ನಾಯಕರ ವಾಹನಗಳ ಮೇಲೆ ಕಲ್ಲುಗಳನ್ನು ಎಸೆದು ಹಾಗೂ ಪೊರಕೆ ಹಿಡಿದು ಪ್ರತಿಭಟಿಸಿದರು.
ಮಾದ್ಯಮಗಳ ಜತೆ ಕಾಂಗ್ರೆಸ್ ನಾಯಕರನ್ನು ಕಂಡ ನಿಡ್ಡೋಡಿ, ಬಂಗೇರಪದವು ಗ್ರಾಮಸ್ಥರು ನಾಯಕರು ತೆರಳಿದ್ದ ವಾಹನಗಳ ಮೇಲೆ ಘೇರಾವ್ ಹಾಕಿ ನಿಡ್ಡೋಡಿ ಪ್ರಸ್ತಾಪಿತ ಪ್ರದೇಶಕ್ಕೆ ತೆರಳದಂತೆ ತಡೆದರು. ಅಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ನಮ್ಮದು ರಾಜಕೀಯ ರಹಿತ ಹೋರಾಟ, ರಾಜಕೀಯ ಪಕ್ಷಗಳು ನಮ್ಮಲ್ಲಿಗೆ ಬಂದು ವಸ್ತುಸ್ಥಿತಿಯನ್ನು ಅರಿಯುವುದು ಬೇಡ ನಮ್ಮ ಬಗ್ಗೆ ಕಾಳಜಿ ಇರುವುದೇ ಆದಲ್ಲಿ ಸರ್ಕಾರದ ಜನಪ್ರತಿನಿಧಿಗಳನ್ನು ನಮ್ಮ ಬಳಿ ಬರಲಿ ಅವರಲ್ಲಿ ನಮ್ಮ ಯೋಜನೆಯ ಸಾಧಕ ಭಾದಕಗಳನ್ನು ಹೇಳಿಕೊಳ್ಳುತ್ತೇವೆ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರನ್ನು ಸಮಾಧಾನ ಪಡಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಮೊಹಮ್ಮದ್ ಬದ್ರುದ್ದೀನ್, ಕೆಪಿ.ಸಿ.ಸಿ ಸದಸ್ಯರಾದ ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಡೆನಿಸ್ ಡಿ ಸಿಲ್ವ, ಟಿ.ಕೆ.ಸುಧೀರ್, ಸುರೇಶ್ ಶೆಟ್ಟಿ, ಹಾಗೂ ಕರ್ನಾಟಕ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರೋಹಿತಾಕ್ಷ ರೈ ತಂಡದಲ್ಲಿದ್ದರು.

Kinnigoli-29071303

Kinnigoli-29071304

Kinnigoli-29071305

Kinnigoli-29071306

Kinnigoli-29071307

Kinnigoli-29071308

Kinnigoli-29071309

Kinnigoli-29071310

Kinnigoli-29071311

Kinnigoli-29071312

Kinnigoli-29071313

 

Comments

comments

Comments are closed.

Read previous post:
Kinnigoli-29071302
ಕಿನ್ನಿಗೋಳಿ ಯಕ್ಷಗಾನ ತಾಳಮದ್ದಲೆ ಸಪ್ತಾಹ

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಪ್ರಜ್ಞೆ ಮತ್ತು ಪುರಾಣ ಜ್ಞಾನವನ್ನು ಹೆಚ್ಚಿಸುವ ಅಚ್ಚ ಕನ್ನಡದ ಯಕ್ಷಗಾನ ತಾಳಮದ್ದಲೆಯನ್ನು ಮೂಲ ಸ್ವರೂಪದಲ್ಲೇ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ’...

Close