ಮೌಲ್ಯಯುತ ಶಿಕ್ಷಣ: ಲಕ್ಷ್ಮೀನಾರಾಯಣ ಆಸ್ರಣ್ಣ

ಕಿನ್ನಿಗೋಳಿ: ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಬೇಕು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಬುಧವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಶಾಲಾ ಸಂಸತ್ತು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೋ| ಜಯರಾಮ ಪೂಂಜಾ ಸ್ವಾಗತಿಸಿ, ಪ್ರಸ್ತಾವನೆಗೈದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣ ಮತ್ತು ಭವಿಷ್ಯದ ಉತ್ತಮ ರಾಜಕಾರಣಿಗಳನ್ನು ಸೃಷ್ಟಿಸುವಲ್ಲಿ ಶಾಲಾ ಸಂಸತ್ತು ಮತ್ತು ವಿದ್ಯಾರ್ಥಿ ಸಂಘಗಳು ಸಹಕಾರಿಯಾಗುತ್ತದೆ. ಮಂದೆ ಉತ್ತಮ ನಾಯಕನಾಗುತ್ತೇನೆ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಬೇಕು ಎಂದು ಮಂಗಳೂರು ರಥಬೀದಿ ಮಹಿಳಾ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಶ್ಯಾಮಲಾ ಎಸ್. ಮಾತನಾಡಿದರು.
ಕಟೀಲು ಪ.ಪೂ.ಕಾಲೇಜು ರಾಜ್ಯ ಶಾಸ್ತ್ರ ಉಪನ್ಯಾಸಕಿ ಭಾರತಿ ಎನ್. ಶೆಟ್ಟಿ ವಂದಿಸಿದರು. ಅನುಜ್ಞಾ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-02081302

Kinnigoli-02081303

Kinnigoli-02081304

Kinnigoli-02081305

Comments

comments

Comments are closed.

Read previous post:
Kinnigoli-02081301
ಮುಲ್ಕಿ: ಉದ್ಯೋಗ ಖಾತರಿ ಯೋಜನೆ

Bhagyavan Sanil ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋದನೆಯ ವಿಶೇಷ ಗ್ರಾಮ ಸಭೆ ಗೇರುಕಟ್ಟೆಯ ಮುಂಡಾಳಸಮಾಜ ಭವನದಲ್ಲಿ...

Close