ಮುಲ್ಕಿ: ಉದ್ಯೋಗ ಖಾತರಿ ಯೋಜನೆ

Bhagyavan Sanil
ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋದನೆಯ ವಿಶೇಷ ಗ್ರಾಮ ಸಭೆ ಗೇರುಕಟ್ಟೆಯ ಮುಂಡಾಳಸಮಾಜ ಭವನದಲ್ಲಿ ಗುರುವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ತಾಲೂಕು ಸಂಯೋಜನಾಧಿಕಾರಿ ರಾಜು ಸಾಲ್ಯಾನ್ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಎಲ್ಲರ ಒಗ್ಗೂಡುವಿಕೆಯಿಂದ ಯಶಸ್ವಿಯಾಗಿ ಮುಂದುವರೆಯುತ್ತದೆ.ಇದರಿಂದ ಗ್ರಾಮೀಣ ನಿರುದ್ಯೋಗಿಗಳಿಗೆ ಸಹಕಾರಿಯಾಗಲಿದೆ,ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕೆಲಸ ಸಾಧ್ಯ. ಕೃಷಿ ತೋಟಗಾರಿಕೆಯಲ್ಲಿ ಉದ್ಯೋಗ ಖಾತರಿ ಯೋಜನೆ ಮಾಡಬಹುದು. ಆದಷ್ಟು ಈ ಯೋಜನೆಯನ್ನು ಜನಪ್ರಿಯಗೊಳಿಸಲು ಅಧಿಕಾರಿಗಳು ಶ್ರಮಪಡಬೇಕು ಎಂದರು. ಕೃಷಿಕರಿಗೆ ಮಾಹಿತಿ ಹಕ್ಕಿನ ಮೂಲಕ ಈ ಯೋಜನೆಯ ಪ್ರತಿಯೊಂದು ವಿಷಯದಲ್ಲೂ ಲೆಕ್ಕ ಕೇಳಬಹುದು,ತಾವು ಮಾಡಿದ ಕೆಲಸಕ್ಕೆ ಪ್ರತಿಫಲ ಕೇಳುವ ಹಕ್ಕು ಪ್ರತಿಯೊಬ್ಬನಿಗೂ ಇದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಶಾರಾದಾ ವಸಂತ್,ಉಪಾಧ್ಯಕ್ಷ ಮೋಹನ ಕುಬೆವೂರು, ಸದಸ್ಯರಾದ ಜಯಕುಮಾರ್ ಮಟ್ಟು, ಸಂಜೀವ ಶೆಟ್ಟಿ, ವಿಮಲಾಸುವರ್ಣ.ಗೀತಾ ಆಚಾರ‍್ಯ, ಕಿಲ್ಪಾಡಿ ಪಂ. ಅಬಿವೃದ್ದಿ ಅಧಿಕಾರಿ ಶೋಭಾ ಎಚ್ ,ಉದ್ಯೋಗ ಖಾತರಿ ಯೋಜನೆಯ ಸಹಾಯಕ ಅಧಿಕಾರಿ ಸಿಪ್ರಿಯಾನ್ ಮಿರಾಂಡ, ಪ್ರಕಾಶ ಕಿನ್ನಿಗೋಳಿ ಉಪಸ್ಥಿತರಿದ್ದರು. ಯೋಜನೆಯ ಸಂಪನ್ಮೂಲ ವ್ಯಕ್ತಿ ಕಿಶೋರ್ ಸ್ವಾಗತಿಸಿ ವಂದಿಸಿದರು.

Kinnigoli-02081301

Comments

comments

Comments are closed.

Read previous post:
kinnigoli0108201303
ಗಿಡಿಗೆರೆ ಫಿನೈಲ್ ತಯಾರಿ ತರಬೇತಿ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ದುರ್ಗಾಂಬಿಕಾ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಫಿನೈಲ್ ತಯಾರಿ ತರಬೇತಿ ಕಾರ್ಯಕ್ರಮ ಇತ್ತೀಚಿಗೆ ಕಟೀಲು ಗಿಡಿಗೆರೆಯಲ್ಲಿ...

Close