ಪಂಜ ತಡೆಗೋಡೆ ಕುಸಿತ-ನೆರೆ ಭೀತಿ

Raghunath Kamath

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಬಲಗುತ್ತು ಸಮೀಪ ನಂದಿನಿ ನದಿಯ ತಡೆಗೋಡೆ ಬಳಿಯಲ್ಲಿದ್ದ ಬೃಹತ್ ಆಲದ ಮರ ಮಳೆಗೆ ಬುಡ ಸಮೇತ ಬಿದ್ದು ತಡೆಗೋಡೆ ಗೋಡೆ ಬಿರುಕು ಬಿಟ್ಟಿದೆ. ಕಳೆದ ಮಳೆಗಾಲದಲ್ಲಿ ತಡಗೋಡೆ ಕುಸಿತ ಗೊಂಡು ಹಲವು ದಿನ ಪರಿಸರದಲ್ಲಿ ಭಾರಿ ಪ್ರಮಾಣದಲ್ಲಿ ನೆರೆ ಬೀತಿಯಿಂದಾಗಿ ಅಪಾರ ಆಸ್ತಿ ಪಾಸ್ತಿ ಹಾನಿಯುಂಟಾಗಿತ್ತು. ಆದರೆ ಈಗ ಮರ ಉರುಳಿ ಬಿದ್ದು ತಡೆಗೋಡೆ ಹಾನಿಯಾದ್ದರಿಂದ ಗ್ರಾಮದ ಜನರಲ್ಲಿ ನೆರೆ ಬೀತಿ ಕಾಡುತ್ತಿದೆ. ತಡೆಗೋಡೆಯ ಪಕ್ಕದಲ್ಲಿ ಬಲಗುತ್ತು ಸತೀಶ್ ಶೆಟ್ಟಿ ಹಾಗೂ ಜಗನ್ನಾಥ ದೇವಾಡಿಗರ ಮನೆ ಅಪಾಯದಂಚಿನಲ್ಲಿದ್ದು ,ಸುಮಾರು ೨೦೦ ಎಕರೆ ಜಾಗದಲ್ಲಿ ಭತ್ತದ ಕೃಷಿಗೂ ಹಾನಿಯಾಗುವ ಭೀತಿ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮರ ಬಿದ್ದುದರಿಂದ ನದಿಯಲ್ಲಿ ನೀರು ತಡೆ ಹಿಡಿಯಲ್ಪಟ್ಟಿದ್ದರಿಂದ ನೆರೆ ಹೆಚ್ಚಾಗಿತ್ತು. ಜನಪ್ರತಿನಿಧಿಗಳು ಹಾಗೂ ಗ್ರಾಮದ ಜನರ ಸಹಭಾಗಿತ್ವದಲ್ಲಿ ಮರವನ್ನು ಕಡಿದು ತೆರವುಗೊಳಿಸಲಾಗಿದೆ. ಬಿರುಕು ಬಿಟ್ಟ ತಡೆಗೋಡೆಯ ಸ್ಥಳದಲ್ಲಿ ವ್ಯಾಪಕ ಹಾನಿಯಾಗದಂತೆ ಮರಳು ಚೀಲಗಳನ್ನು ಇಡಲಾಗಿದೆ.

Kinnigoli03081305

Comments

comments

Comments are closed.

Read previous post:
Kinnigoli03081304
ಯಕ್ಷಗಾನ – ವಾಗ್ವೈಭವ ಉದ್ಘಾಟನಾ ಸಮಾರಂಭ

ಕಿನ್ನಿಗೋಳಿ : ದೃಶ್ಯ ಕಾವ್ಯದ ಯಕ್ಷಗಾನ ಹಾಗೂ ತಾಳಮದ್ದಲೆಗಳ ಸ್ಥಾನ ಭಾರತೀಯ ಸಂಸ್ಕೃತಿಯ ಪ್ರಚಾರದಲ್ಲಿ ಬಹು ದೊಡ್ಡದು. ಇದು ಕನ್ನಡದ ಕಂಪನ್ನು ಸಾಕಾರಗೊಳಿಸುವ ಪ್ರಾಚೀನ ಜನಪದ ಕಲಾ ಪ್ರಕಾರ...

Close