ಯಕ್ಷಗಾನ – ವಾಗ್ವೈಭವ ಉದ್ಘಾಟನಾ ಸಮಾರಂಭ

ಕಿನ್ನಿಗೋಳಿ : ದೃಶ್ಯ ಕಾವ್ಯದ ಯಕ್ಷಗಾನ ಹಾಗೂ ತಾಳಮದ್ದಲೆಗಳ ಸ್ಥಾನ ಭಾರತೀಯ ಸಂಸ್ಕೃತಿಯ ಪ್ರಚಾರದಲ್ಲಿ ಬಹು ದೊಡ್ಡದು. ಇದು ಕನ್ನಡದ ಕಂಪನ್ನು ಸಾಕಾರಗೊಳಿಸುವ ಪ್ರಾಚೀನ ಜನಪದ ಕಲಾ ಪ್ರಕಾರ ಎಂದು ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯಕ್ಷಲಹರಿ ಹಾಗೂ ಯುಗಪುರುಷದ ಆಶ್ರಯದಲ್ಲಿ ನಡೆದ ಯಕ್ಷಗಾನ – ವಾಗ್ವೈಭವ (ಯುಗಳ ಸಂಭಾಷಣೆ) ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶದ ಮೌಲ್ಯಗಳ ಅಧಃ ಪತನವಾಗುವ ಕಾಲ ಘಟ್ಟದಲ್ಲಿ ಜನರು ಕೇವಲ ಧನಾರ್ಜನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡದೆ ಭವ್ಯ ಪರಂಪರೆಯ ಸಂಸ್ಕಾರ ಸಂಸ್ಕೃತಿ, ಮೌಲ್ಯಗಳನ್ನು ಮೈಗೂಡಿಸಬೇಕು ಎಂದು ಮೂಡಬಿದಿರೆ ವಿಜಯಲಕ್ಷ್ಮೀ ಕಾಶ್ಯೂ ಇಂಡಸ್ಡ್ರೀಸ್ ಮಾಲಕ ಅನಂತಕೃಷ್ಣ ರಾವ್ ಮೂಡಬಿದ್ರೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇ| ಮೂ. ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಅವರನ್ನು ಗೌರವಿಸಲಾಯಿತು.
ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಸ್ಟೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಕೇಶವ ನಾಯ್ಕ್, ನಿವೃತ್ತ ಉಪತಹಶೀಲ್ದಾರ್ ವೈ ಯೋಗೀಶರಾವ್, ಉದ್ಯಮಿ ಪುರಂದರ ಶೆಟ್ಟಿಗಾರ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಉದ್ಯಮಿ ಧನಂಜಯ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು, ಉಪಾಧ್ಯಕ್ಷ ಪಿ. ಸತೀಶ್ ರಾವ್ ವಂದಿಸಿದರು, ಕಾರ್ಯದರ್ಶಿ ಶ್ರೀಧರ ಡಿ. ಎಸ್. ಕಾರ್ಯಕ್ರಮ ನಿರೂಪಿಸಿದರು.

Kinnigoli03081302

Kinnigoli03081303

Kinnigoli03081304

Comments

comments

Comments are closed.

Read previous post:
Kinnigoli03081301
ಕಟೀಲು ಶಾಲೆಯಲ್ಲಿ ಕ್ಷೀರ ಭಾಗ್ಯ ಯೋಜನೆ

ಕಿನ್ನಿಗೋಳಿ: ಮಕ್ಕಳಲ್ಲಿನ ಅಪೌಷ್ಟಿಕ ಮತ್ತು ರಕ್ತ ಹೀನತೆ ಹೋಗಲಾಡಿಸಿ ಸಧೃಡ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸರಕಾರ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿರುವುದು ಶ್ಲಾಘನೀಯ ಎಂದು ಕಟೀಲು ದೇವಳ ಅರ್ಚಕ...

Close