ತೋಕೂರು – ಸಸಿ ವಿತರಣೆ

Raghunath Kamath
ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ನಣ್ಯ ಮಹಾಗಣಪತಿ ಸೋಟ್ಸ್ ಕ್ಲಬ್, ಪಡುಪಣಂಬೂರು ಗ್ರಾಮ ಪಂಚಾಯತ್ ಮತ್ತು ಜಲಾನಯನ ಇಲಾಖೆಯ ಜಂಟೀ ಆಶ್ರಯದಲ್ಲಿ ಸಾರ್ವಜನಿಕ ಸಸಿ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಶ್ರೀ ಸುಬ್ರಹ್ಮಣ್ಯ ದೇವಳದ ಸಭಾ ಭವನದಲ್ಲಿ ನಡೆಯಿತು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್ ಸಸಿ ವಿತರಿಸುವ ಮೂಲಕ ಚಾಲನೆ ನೀಡಿದರು. ಪಮಚಾಯಿತಿ ವ್ಯಾಪ್ತಿಯ ತೋಕೂರು ಗ್ರಾಮದಲ್ಲಿ ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಯ 6625 ಸಸಿಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ. ಆರ್. ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಗ್ರಾ. ಪಂ. ಸದಸ್ಯ ಮೋಹನ್ ಕುಮಾರ್, ಸಂಪಾವತಿ, ನಾರಾಯಣ ಪೂಜಾರಿ, ದೇವಳ ವ್ಯವಸ್ಥಾಪನ ಸಮಿತಿಯ ಎಲ್. ಕೆ. ಸಾಲ್ಯಾನ್, ಜಲಾನಯನ ಇಲಾಖೆಯ ಜಿಲ್ಲಾ ಸಂಯೋಜಕ ಶ್ರೀನಿವಾಸ, ಸೋಟ್ಸ್ ಕ್ಲಬ್‌ನ ಸುರೇಶ್ ಶೆಟ್ಟಿ , ಕಾರ್ಯದರ್ಶಿ ಗಣೇಶ್ ದೇವಾಡಿಗ, ಪ್ರಶಾಂತ್ ಕುಮಾರ್ ಬೇಕಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli03081307

Comments

comments

Comments are closed.

Read previous post:
Kinnigoli03081306
ಸ್ತನ್ಯಪಾನ ಮಾಹಿತಿ ಕಾರ್ಯಗಾರ

Raghunath Kamath ಕಿನ್ನಿಗೋಳಿ: ಕೆಂಚನಕೆರೆ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಕಿಲ್ಪಾಡಿ ಉಪ ಕೇಂದ್ರದ ಆಶ್ರಯದಲ್ಲಿ ವಿಟಮಿನ್ ಎ ಮಕ್ಕಳಿಗೆ ಕೂಡುವ ಕಾರ್ಯಕ್ರಮ ಗುರುವಾರ ನಡೆಯಿತು. ಕಿರಿಯ...

Close