ಮುಚ್ಚೂರು ದನಗಳ ಕಳ್ಳತನ : ನಳಿನ್ ಭೇಟಿ

Bhagyavan Sanil
ಮೂಲ್ಕಿ : ಕಾಂಗ್ರೆಸ್ ಸರಕಾರ ಬಂದ ಮೇಲೆ ಅಪರಾಧಗಳು ಹೆಚ್ಚುತ್ತಿದ್ದು, ಭಯಭೀತ ವಾತಾವರಣ ಸೃಷ್ಟಿಸಿ ಗೋವುಗಳ ದರೋಡೆ ಮಾಡುತ್ತಿರುವುದು ಹೆಚ್ಚಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಮುಚ್ಚೂರು ವಿದ್ಯಾಧರ ಹೆಗ್ಡೆಯವರ ಹಟ್ಟಿಯಿಂದ ಮೂರು ದನಗಳನ್ನು ದುಷ್ಕರ್ಮಿಗಳು ಕದ್ದೊಯ್ದ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಹೈನುಗಾರ ವಿದ್ಯಾಧರ ಹೆಗ್ಡೆಯವರು ಸಾಂಸದ ನಳಿನ್ ಕುಮಾರ್‌ರಲ್ಲಿ ನೋವು ಹೇಳಿಕೊಂಡರು.
ಶುಕ್ರವಾರ ಮುಚ್ಚೂರಿನ ಹೆಗ್ಡೆಯವರ ಮನೆಗೆ ಭೇಟಿ ನೀಡಿ ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಪೋಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಜನಾರ್ದನ ಗೌಡ, ಜಗದೀಶ ಶೇಣವ, ಈಶ್ವರ್ ಕಟೀಲ್ ಮುಂತಾದವರಿದ್ದರು.

Kinnigoli-05081302

Comments

comments

Comments are closed.

Read previous post:
Kinnigoli-05081301
Sr Maude BS (89) Passed away

Sr Maude BS (89), D/o Late Lawrence D’souza and Late Magdalene Pinto of Kirem Parish. Belonging to the Sisters of...

Close