ಮೂಲ್ಕಿ: ಹಾಸ್ಯ ಉಪನ್ಯಾಸ ಕಾರ್ಯಕ್ರಮ

Bhagyavan Sanil
ಮೂಲ್ಕಿ: ನಿಯಮಿತ ಹಾಸ್ಯ ಪ್ರವೃತ್ತಿಯ ಮೂಲಕ ಮನುಷ್ಯ ಆಯುಷ್ಯ, ಆರೋಗ್ಯ ಹೆಚ್ಚಿಸಲು ಸಾಧ್ಯ ಎಂದು ನಿವೃತ್ತ ಪ್ರಾದ್ಯಾಪಕ ಹೆಬ್ರಿ ಪ್ರೊ| ಮ.ನಾ ಹೆಬ್ಬಾರ್ ಹೇಳಿದರು.
ಶುಕ್ರವಾರ ಮುಲ್ಕಿಯ ವಿಜಯ ಕಾಲೇಜು ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆದ ಹಾಸ್ಯ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿಂಗಾರ ಬಿಡಿಸುವ ಮೂಲಕ ಉದ್ಘಾಟಿಸಿ ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಹಾಸ್ಯ ಆರೋಗ್ಯಕ್ಕೆ ಟಾನಿಕ್ ಇದ್ದಂತೆ ಆಶದರೆ ಅದು ಸಾಂಧರ್ಭಿವಾಗಿ ಮತ್ತು ಇತರರನ್ನು ನಗಿಸುವಂತೆ ಮಾತ್ರವಲ್ಲ ಯಾರನ್ನೂ ನೋಯಿಸದಂತೆ ಪರಿಶುದ್ದವಾಗಿರಬೇಕು ಎಂದರು.
ಅಧ್ಯಕ್ಷ ಸ್ಥಾನದಿಂದ ಡಾ| ಎಂ.ಎ.ಆರ್.ಕುಡ್ವ, ಇವರು ಹಾಸ್ಯದ ಮಹತ್ವದ ಕುರಿತು ಮಾತನಾಡಿದರು. ಪ್ರೊ| ಕೆ.ಆರ್.ಶಂಕರ್, ಪ್ರಾಂಶುಪಾಲರು, ವಿಜಯ ಕಾಲೇಜು, ಮುಲ್ಕಿ ಇವರು ಹಾಸ್ಯ ಕವನದೊಂದಿಗೆ ಹಾಸ್ಯದ ಕುರಿತು ತಿಳಿಹೇಳಿದರು. ಪ್ರೊ| ನಾರಾಯಣ, ಮುಖ್ಯಸ್ಥರು, ವಾಣಿಜ್ಯ ಶಾಸ್ತ್ರ ವಿಭಾಗ, ಪ್ರೊ| ಪಮೀದ ಬೇಗಂ, ಪ್ರಾಂಶುಪಾಲರು, ಪದವಿ ಪೂರ್ವ ಕಾಲೇಜು, ಮುಲ್ಕಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಹಾಗೂ ಪ್ರಾಸ್ತವಿಕ ಮಾತನ್ನು ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಪಿ.ಸಿ.ದಮಯಂತಿ, ನೆರವೇರಿಸಿದರು. ಅತಿಥಿಗಳ ಪರಿಚಯವನ್ನು ಕನ್ನಡ ಉಪನ್ಯಾಸಕರಾದ ಸುರೇಶ್ ಮರಿಣಾಪುರ ನೀಡಿದರು ಮತ್ತು . ವಿದ್ಯಾರ್ಥಿಗಳಾದ ರಾಕೇಶ್ ಮತ್ತು ಪೂಜಾ ಕಾರ್ಯಕ್ರಮ ನಿರೂಪಣೆ ಮಾಡಿದರು.ಸೌಮ್ಯ, ಇವರು ವಂದಿಸಿದರು.

Kinnigoli-05081303

Comments

comments

Comments are closed.

Read previous post:
Kinnigoli-05081302
ಮುಚ್ಚೂರು ದನಗಳ ಕಳ್ಳತನ : ನಳಿನ್ ಭೇಟಿ

Bhagyavan Sanil ಮೂಲ್ಕಿ : ಕಾಂಗ್ರೆಸ್ ಸರಕಾರ ಬಂದ ಮೇಲೆ ಅಪರಾಧಗಳು ಹೆಚ್ಚುತ್ತಿದ್ದು, ಭಯಭೀತ ವಾತಾವರಣ ಸೃಷ್ಟಿಸಿ ಗೋವುಗಳ ದರೋಡೆ ಮಾಡುತ್ತಿರುವುದು ಹೆಚ್ಚಿದೆ ಎಂದು ಸಂಸದ ನಳಿನ್...

Close