ಮೂಲ್ಕಿ:ಧೂಮಪಾನ ಜಾಗೃತಿ ಕಾರ್ಯಕ್ರಮ

Bhagyavan Sanil
ಮೂಲ್ಕಿ: ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಕ್ಕೆ ಗುರಿಯಾಗುದರಿಂದ ವಿದ್ಯಾರ್ಥಿಯ ಭವಿಷ್ಯದ ಜೊತೆಗೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಎಂದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು.
ಶುಕ್ರವಾರ ವಿಜಯ ಪದವಿ ಪೂರ್ವ ಕಾಲೇಜು, ಇದರ ವತಿಯಿಂದ ಧೂಮಪಾನ ಮತ್ತು ಮಾದಕ ದ್ರವ್ಯ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ತಂದೆ ತಾಯಿಯರು ಮಕ್ಕಳ ಮೇಲೆ ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ಶಾಲೆಗೆ ಕಳುಹಿಸುತ್ತಾರೆ. ಯಾಕೆಂದರೆ ತನ್ನ ಮಗ ಅಥವಾ ಮಗಳು ಓದಿ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಬೇಕು.ಅವರ ಕನಸನ್ನು ನನಸಾಗಿಸುವುದು ಮಕ್ಕಳ ಆದ್ಯ ಕರ್ತವ್ಯ ಆದುದರಿಂದ ಯಾವುದೇ ವಿದ್ಯಾರ್ಥಿಯು ಮಾದಕ ದ್ರವ್ಯ ವ್ಯಸನದ ಚಟಕ್ಕೆ ಬಲಿ ಬೀಳಬೇಡಿ ಎಂದು ಎಚ್ಚರಿಕೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ| ಕೆ.ಆರ್.ಶಂಕರ್, ಮುಲ್ಕಿ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ| ನಾರಾಯಣ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಕುಮಾರ್ ಬಿ ಸ್ವಾಗತಿಸಿದರು. ಪ್ರಾಸ್ತಾವನೆಯನ್ನು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ| ಪಮೀದಾ ಬೇಗಂ ಮಂಡಿಸಿದರು.ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಸೋಮಶೇಖರ ಭಟ್, ಸಂಸ್ಕೃತ ವಿಭಾಗ ಇವರು ನೆರವೇರಿಸಿದರು ಕವಿತಾ ಜೆ.ಪಿ., ಅರ್ಥಶಾಸ್ತ್ರ ವಿಭಾಗ ಇವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರಸಾಯನ ಶಾಸ್ತ್ರ ವಿಭಾಗದ ನಿವೇದಿತಾ, ನಡೆಸಿದರು.

Kinnigoli-05081304

Comments

comments

Comments are closed.

Read previous post:
Kinnigoli-05081303
ಮೂಲ್ಕಿ: ಹಾಸ್ಯ ಉಪನ್ಯಾಸ ಕಾರ್ಯಕ್ರಮ

Bhagyavan Sanil ಮೂಲ್ಕಿ: ನಿಯಮಿತ ಹಾಸ್ಯ ಪ್ರವೃತ್ತಿಯ ಮೂಲಕ ಮನುಷ್ಯ ಆಯುಷ್ಯ, ಆರೋಗ್ಯ ಹೆಚ್ಚಿಸಲು ಸಾಧ್ಯ ಎಂದು ನಿವೃತ್ತ ಪ್ರಾದ್ಯಾಪಕ ಹೆಬ್ರಿ ಪ್ರೊ| ಮ.ನಾ ಹೆಬ್ಬಾರ್ ಹೇಳಿದರು....

Close