ಕೊಂಡೆಮೂಲ-ನಡುಗೋಡು: ಆಟಿಡೊಂಜಿ ಕೂಟ

ಕಿನ್ನಿಗೋಳಿ: ಪಾರಂಪರಿಕವಾಗಿ ಬಂದಂತಹ ಆಚರಣೆ, ಆಹಾರ ಪದ್ಧತಿಗಳು ನಗರೀಕರಣದ ಪ್ರಭಾವದಿಂದಾಗಿ ಹಿಂದಿನ ಪದ್ಧತಿಗಳು ಕಣ್ಮರೆಯಾಗುತ್ತಿದೆ ತುಳು ಸಂಸ್ಕೃತಿಯ ಒಂದೊಂದೆ ಬೇರುಗಳು ನಾಶವಾಗುವ ಈ ಸಮಯದಲ್ಲಿ ವರ್ಷಕ್ಕೊಮ್ಮೆಯಾದರೂ ಇದನ್ನು ಸ್ಮರಿಸಿದರೆ ಈ ತಲೆಮಾರಿನವರಿಗೆ ಉಪಯೋಗವಾಗುತ್ತದೆ. ಸಾಮಾಜಿಕ ಪರಿವರ್ತನೆಗೆ ಪೂರಕ ಕಾರ್ಯಕ್ರಮವಿದು. ಯುವ ಪೀಳಿಗೆಗೆ ಕಲಿಸಿಕೊಡುವುದು ಅತೀ ಅಗತ್ಯ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಹೇಳಿದರು
ಮಂಗಳೂರು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಂಡೆಮೂಲ- ನಡುಗೋಡು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಮಲ್ಲಿಗೆ ಜ್ಞಾನ ವಿಕಾಸ ಕೇಂದ್ರ ಮಲ್ಲಿಗೆ ಅಂಗಡಿ, ಶ್ರೀ ದುರ್ಗಾಂಬಿಕಾ ಜ್ಞಾನ ವಿಕಾಸ ಕೇಂದ್ರ ಗಿಡಿಗೆರೆ ಕಟೀಲು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಕಾರದೊಂಡಿಗೆ ಭಾನುವಾರ ಕಟೀಲು ಸರಸ್ವತಿ ಸದನ ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ಕೆ.ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು, ಕಿನ್ನಿಗೋಳಿ ವಲಯಾಧ್ಯಕ್ಷೆ ಸುಜಾತ ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಮಂಗಳೂರು ಧ.ಗ್ರಾ.ಯೋ. ಯೋಜನಾಧಿಕಾರಿ ರಾಘವ ಎಂ,, ಮಂಗಳೂರು ಕೇಂದ್ರ ಒಕ್ಕೂಟ ಅಧ್ಯಕ್ಷ ಆಲ್ವಿನ್ ಎಫ್. ಡಿ’ಸೋಜ, ಉದ್ಯಮಿ ಧನಂಜಯ ಪಿ.ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸುದಾನಂದ ಸ್ವಾಗತಿಸಿದರು, ಶ್ಯಾಮ ಡಿ.ಕೆ ವಂದಿಸಿದರು, ಶುಭಾ ಕಾರ್ಯಕ್ರಮ ನಿರೂಪಿಸಿದರು.

Kinnigoli-06081306

Kinnigoli-06081307

Comments

comments

Comments are closed.

Read previous post:
Kinnigoli-06081305
ಎಸ್.ಕೋಡಿ : ಆಟಿ ಆಚರಣೆ

ಕಿನ್ನಿಗೋಳಿ : ಹಿಂದಿನ ಕಾಲದ ಹಳೆ ಕಟ್ಟುಪಾಡುಗಳನ್ನು ಮೂಡನಂಬಿಕೆ ಅಂತ ಪರಿಗಣಿಸದೆ ಇಂದಿನ ಯುವಜನತೆ ಮುಂದುವರಿಸಬೇಕು. ಆಚರಣೆಗೆ ವೈಜ್ಞಾನಿಕ ಮಹತ್ವಗಳಿವೆ. .ಹಿಂದಿನ ಆಚರಣೆಗಳು ಯುವಜನತೆಯಿಂದ ದೂರವಾಗುತ್ತಿದೆ. ಆಟಿಡೊಂಜಿ ದಿನದಂತಹ...

Close