ಭ್ರಾಮರೀ ಮಹಿಳಾ ಸಮಾಜ : ಆಟಿಡೊಂಜಿ ದಿನ

ಕಿನ್ನಿಗೋಳಿ: ಹಳೆಯ ಪದ್ಧತಿಗಳನ್ನು, ಆಚರಣೆಗಳನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾಗಿದ್ದು ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಹಿಂದಿನ ಜೀವನ ಪದ್ಧತಿಗಳನ್ನು ನಾವು ಈಗ ಹೇಗೆ ಆಚರಿಸಿಕೊಂಡು ಬರುತ್ತಿದ್ದೇವೆಯೋ ಹಾಗೆ ಮುಂದಿನ ಪೀಳಿಗೆಗೆ ನಮ್ಮ ಜೀವನ ಪದ್ಧತಿಯನ್ನು ತಿಳಿಸಿಕೊಡುವ ಕಾರ್ಯಕ್ರಮ ಆಗಬೇಕಾಗಿದೆ ಎಂದು ಕಿನ್ನಿಗೋಳಿ ಸೈಂಟ್ ಲಾರೆನ್ಸ್ ಶಾಲೆಯ ಶಿಕ್ಷಕಿ ಲೋಲಾಕ್ಷಿ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ಆಯೋಜಿಸಿದ ಆಟಿದ ಕೂಟ ಕಾರ್ಯಕ್ರಮದಲ್ಲಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾತಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಪೂರ್ವಜರ ಜೀವನ ಪದ್ಧತಿ ವೈಜ್ಞಾನಿಕವಾಗಿದ್ದು ಅವುಗಳನ್ನು ಆಚರಿಸಿಕೊಂಡು ಮುಂದಿನ ಪೀಳಿಗೆಗೆ ನಮ್ಮ ಜೀವನ ಪದ್ಧತಿಯನ್ನು ತಿಳಿಸಿಕೊಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ ಎಸ್.ಜಿ., ಭ್ರಾಮರೀ ಮಹಿಳಾ ಸಮಾಜ ಅಧ್ಯಕ್ಷೆ ಮೀನಾಕ್ಷಿ ಡಿ. ಕುಂದರ್, ಅನುಷಾ ಕರ್ಕೇರ, ಚೈತ್ರ, ಸಂಧ್ಯಾ, ಭಾನುಮತಿ ಉಪಸ್ಥಿತರಿದ್ದರು.
ಸುಜಾತ ಶೆಟ್ಟಿ ಪ್ರಾರ್ಥಿಸಿ, ವಿನಯ ಸ್ವಾಗತಿಸಿದರು. ಉಪಾಧ್ಯಕ್ಷೆ ಸುನಂದ ಜೆ. ಕರ್ಕೇರ ವಂದಿಸಿದರು. ರೇವತಿ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.

Kinnigoli-06081310

Kinnigoli-06081311

Kinnigoli-06081312

Comments

comments

Comments are closed.

Read previous post:
Kinnigoli-06081309
ಮುಲ್ಕಿ ಬಂಟರ ಸಂಘ: ಆಟಿಡೊಂಜಿ ದಿನ

ಕಿನ್ನಿಗೋಳಿ : ಹಿಂದೆ ಆಷಾಡ ತಿಂಗಳು ಕಷ್ಟದ ತಿಂಗಳಾಗಿದ್ದು, ವಿಪರೀತ ಮಳೆಯಿಂದ ಜನರು ರೋಗ ರುಜಿನಗಳಿಗೆ ಒಳಗಾಗುತ್ತಿದ್ದರು ಈ ತಿಂಗಳ ಆಹಾರ ಪದ್ದತಿಯಿಂದ ರೋಗವನ್ನು ಉಪಶಮನ ಮಾಡುತ್ತಿದ್ದರು. ಹಿಂದೆ...

Close