ಚರಂಡಿಗೆ ಇಳಿದ ಬಸ್

ಕಿನ್ನಿಗೋಳಿ : ರಸ್ತೆಯಲ್ಲಿ ತುಂಬಿದ್ದ ನೀರಿನ ಪರಿಣಾಮ ಖಾಸಗಿ ಕಾಲೇಜು ಬಸ್ಸು ಸೋಮವಾರ ಸಂಜೆ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದಾಮಸ್ ಕಟ್ಟೆ ಚರ್ಚ್ ಬಳಿ ಚರಂಡಿಗೆ ಇಳಿದಿದೆ. ಈ ಬಗ್ಗೆ ವಿಜಯ ಕರ್ನಾಟಕ ಹಲವಾರು ಬಾರಿ ಸಚಿತ್ರ ವರದಿ ಪ್ರಕಟಿಸಿದ್ದರೂ ಒಂದೆರಡು ಬಾರಿ ಜೆಸಿಬಿ ಬಂದು ಹೊಂಡ ತೋಡಿದ್ದೇ ವಿನಹ ಯಾವುದೇ ಶಾಶ್ವತ ಮುಕ್ತಿ ದೊರಕಿಲ್ಲ. ಹೋದ ವರ್ಷ ಸ್ಥಳೀಯ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಒಂದಿಷ್ಟು ಶ್ರಮದಾನ ಮಾಡಿ ಹೊಂಡ ಮುಚ್ಚಿ ಅಲ್ಪ ಮುಕ್ತಿ ದೊರಕಿಸಿಕೊಟ್ಟಿದ್ದರು ಒಂದು ಬದಿ ಐಕಳ ಪಂಚಾಯಿತಿ ಸೇರಿದರೆ ಹಾಗೂ ಇನ್ನೊಂದು ಬದಿ ಕಿನ್ನಿಗೋಳಿ ಪಂಚಾಯಿತಿ ಸೇರಿದ್ದು ಎರಡೂ ಪಂಚಾಯಿತಿಗಳ ದಿವ್ಯ ನಿರ್ಲಕ್ಷ ಎದ್ದು ತೋರುತ್ತಿದ್ದು ಅಲ್ಲದೆ ಹತ್ತಿರದ ಖಾಸಗಿ ಜಮೀನಿನ ಜನರ ಅಸಹಕಾರ ಕೂಡಾ ಪ್ರಾಮುಖ್ಯತೆ ಪಡೆದಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ತೊಂದರೆ ಹಾನಿ ಉಂಟಾಗುತ್ತಿದ್ದರೆ ಪರೋಕ್ಷವಾಗಿ ಎಲ್ಲರೂ ಕಾರಣಿಕರ್ತರಾಗುತ್ತಿದ್ದರು. ಮಳೆಗಾಲದಲ್ಲಿ ಕೃತಕ ನೆರೆಯಿಂದ ರಸ್ತೆ ಕೆರೆಯಾಗುತ್ತಿದೆ. ಸುಮಾರು ಒಂದು ಅಡಿಕ್ಕಿಂತ ಹೆಚ್ಚು ನೀರು ನಿಲ್ಲುವ ಪರಿಣಾಮ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಬಿದ್ದು ವಾಹನ ಚಾಲಕರಿಗೆ ಅಪಾಯಕಾರಿ ಮಾರಾಣಾಂತಿಕವಾಗಿ ಕಾಡುತ್ತಿದ್ದು ಜನಪ್ರತಿನಿಧಿಗಳು , ಹತ್ತಿರದ ಜಮೀನಿನವರು ಹಾಗೂ ಇಲಾಖೆಯ ಘೋರ ನಿರ್ಲಕ್ಷ ಇನ್ನಾದರೂ ಸರಿಯಾದಿತೇ??? ಇನ್ನಾದರೂ ಪ್ರಾಣ ಹಾನಿಯಾಗುವ ಮೊದಲು ರಸ್ತೆ ಸರಿಪಡಿಸಲೇಬೇಕಾಗಿದೆ. ಇಲ್ಲದಿದ್ದಲ್ಲಿ ಜನರು ಹೋರಾಟಕ್ಕೆ ಸಿದ್ಧರಾಗುವೆವು ಎಂದು ಹೇಳುತ್ತಿದ್ದಾರೆ.

Kinnigoli-06081314

Kinnigoli-06081315

Comments

comments

Comments are closed.

Read previous post:
Kinnigoli-06081313
ಗುತ್ತಕಾಡು : ಆಟಿಡೊಂಜಿ ದಿನ

ಕಿನ್ನಿಗೋಳಿ : ಆಟಿ ಕಳೆಂಜ, ಆಟಿ ಅಮಾವಾಸ್ಯೆ ಆಚರಣೆ ಹಿಂದೆ ವೈಜ್ಞಾನಿಕ ಕಾರಣ ಇದೆ. ಆಟಿಯಲ್ಲಿ ತಿನ್ನಬೇಕಾದ ಸೊಪ್ಪು-ತರಕಾರಿಗಳಲ್ಲಿ ಔಷಧ ಗುಣ ಹೇರಳವಾಗಿರುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು...

Close