ಗುತ್ತಕಾಡು : ಆಟಿಡೊಂಜಿ ದಿನ

ಕಿನ್ನಿಗೋಳಿ : ಆಟಿ ಕಳೆಂಜ, ಆಟಿ ಅಮಾವಾಸ್ಯೆ ಆಚರಣೆ ಹಿಂದೆ ವೈಜ್ಞಾನಿಕ ಕಾರಣ ಇದೆ. ಆಟಿಯಲ್ಲಿ ತಿನ್ನಬೇಕಾದ ಸೊಪ್ಪು-ತರಕಾರಿಗಳಲ್ಲಿ ಔಷಧ ಗುಣ ಹೇರಳವಾಗಿರುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿ, ಉಳಿಸೋ ಪ್ರಯತ್ನ ಆಗಬೇಕು. ತುಳುನಾಡ ಹಬ್ಬ-ಹರಿದಿನಗಳನ್ನು ಇಂದಿನ ಯುವಜನತೆ ಮರೆಯುತ್ತಿರುವುದು ದುರದೃಷ್ಟಕರ. ಅಲ್ಲದೆ, ಶಿಕ್ಷಣ ವ್ಯವಸ್ಥೆಯೂ ಸಂಸ್ಕೃತಿ ಬಿಂಬಿಸುವ ಕೆಲಸ ಮಾಡುತ್ತಿಲ್ಲ ಹಳ್ಳಿ ಜನರ ಜೀವನಶೈಲಿ ಬದಲಾಗುತ್ತಿದೆ.ಆಚರಣೆ ಮರೆತು ನಾವು ವಿದೇಶಿ ವ್ಯಾಮೋಹಿಗಳಾಗುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಾಹಿತಿ, ಕವಿ ಪ್ರಮೀಳಾ ದೀಪಕ್ ಹೇಳಿದರು.
ನಾರಾಯಣ ಗುರು ಮಹಿಳಾ ಮಂಡಲ ಹಾಗೂ ನಾರಾಯಣಗುರು ಸ್ವಸಹಾಯ ಸಂಘದ ಆಶ್ರಯದಲ್ಲಿ ಭಾನುವಾರ ಗುತ್ತಕಾಡು ಕುಶಲ ಪೂಜಾರಿ ಅವರ ಮನೆಯಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮಹಾಬಲ ಪೂಜಾರಿ, ಕುಸುಮ, ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ಜಲಜ, ನಾರಾಯಣ ಗುರು ಸ್ವಸಹಾಯ ಸಂಘ ಅಧ್ಯಕ್ಷ ಅರುಣ್ ಸಾಲ್ಯಾನ್,ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.
ದಿವಾಕರ ಕರ್ಕೆರ ಕಾರ್ಯಕ್ರಮ ನಿರೂಪಿಸಿದರು.

Kinnigoli-06081313

Comments

comments

Comments are closed.