ನಿಡ್ಡೋಡಿ ಉಳಿಸಿ ಗ್ರಾಮ ಸಮಿತಿ ರಚನೆ

ಕಿನ್ನಿಗೋಳಿ: ನಿಡ್ಡೋಡಿ ಉಳಿಸುವ ಉದ್ದೇಶದಿಂದ ಸ್ಥಾಪನೆಯಾಗಲಿರುವ ಅಲ್ಟ್ರಾ ಮೆಗಾ ಉಷ್ಣ ವಿದ್ಯುತ್ ಸ್ಥಾವರ ವಿರೋದಿಸಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು ಕೊಂಡೆಮೂಲ ಗ್ರಾಮಗಳು ಹಾಗೂ ಕಟೀಲು ಪರಿಸರದ ಗ್ರಾಮಸ್ಥರ ಕಟೀಲು ಉಳಿಸಿ, ನಂದಿನಿ ನದಿ ಉಳಿಸಿ, ನಿಡ್ಡೋಡಿ ಉಳಿಸಿ’ ಸಮಿತಿ ರಚನೆ ಭಾನುವಾರ ಕಟೀಲು ಸರಸ್ವತಿ ಸದನದಲ್ಲಿ ನಡೆಯಿತು.
ಪ್ರತಿ ಗ್ರಾಮಗಳ ಹತ್ತು ಸದಸ್ಯರ ಸಮಿತಿ ರಚಿಸಲಾಯಿತು. ಕಟೀಲು ಭಕ್ತರ ಸಮಿತಿಯನ್ನು ಕೂಡಾ ಮುಂದಿನ ದಿನಗಳಲ್ಲಿ ರಚಿಸಲು ಸಮಿತಿಯಲ್ಲಿ ನಿರ್ಧರಿಸಲಾಗಿದೆ.
ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದಿಂದ ನಾಲ್ಕು ಕಿಲೋಮೀಟರ್ ಹತ್ತಿರದ ಕಟೀಲು ದೇವಳ, ನಂದಿನಿ ನದಿಗೂ ಕಂಟಕ ಪ್ರಾಯವಾಗಲಿದ್ದು,ನದಿ ನೀರು ಮಲೀನಗೋಳ್ಳಲಿದೆ. ನಂದಿನಿ ನದಿಗೆ ತಡೆಗೋಡೆ ಹಾಕುವ ಹುನ್ನಾರವಿದ್ದರೆ ನೀರಿನ ಬರದ ಸಾಧ್ಯತೆ ಇದೆ. ಪರಿಸರವೂ ಸಂಪೂರ್ಣ ನಾಶವಾಗುತ್ತದೆ. ನಮ್ಮ ಸಂಸ್ಕಾರ ಧಾರ್ಮಿಕ ವಿಚಾರ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿ ಬರಡು ಭೂಮಿ ಆಗಲಿದೆ. ಈ ಸ್ಥಾವರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಧಾರಣ ಸಾಮಾರ್ಥ್ಯ ಕುಸಿಯಲಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡದೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕೆಂದು ಸಭೆ ನಿರ್ಧರಿಸಿತು.
ನಿಡ್ಡೋಡಿಗೆ ೩೦ ಅಡಿ ರಸ್ತೆ ನಿರ್ಮಾಣ ಕಟೀಲು ಪರಿಸರದವರಿಗೆ ತಿಳಿಯದಂತೆ ಜಲಕದಕಟ್ಟೆಯ ಮೂಲಕ ನಿಡ್ಡೋಡಿಗೆ ಸಂಪರ್ಕಿಸುವ ೩೦ ಅಡಿ ಅಗಲದ ರಸ್ತೆಗೆ ಸರ್ವೆ ಕಾರ್ಯ ನಡೆದಿದೆ ಎಂಬ ಮಾಹಿತಿ ಸಮಿತಿಗೆ ಬಂದಿದೆ. ನಮ್ಮ ನೆಲ, ಜಲ ಉಳಿಸಲು ಎಲ್ಲರೂ ಸಿದ್ಧರಾಗಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಮಿತಿ ಸಭೆಯಲ್ಲಿ ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ತಿಮ್ಮಪ್ಪ ಕೋಟ್ಯಾನ್, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಯುಗಪುರುಷದ ಭುವನಾಭಿರಾಮ ಉಡುಪ, ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ದೇವಸ್ಯ ಮಠದ ವೇದವ್ಯಾಸ ಉಡುಪ, ಐಕಳ ಜಯಪಾಲ ಶೆಟ್ಟಿ, ಕಟೀಲು ಸ್ಪೋಟ್ ಮತ್ತು ಗೇಮ್ಸ್ ಟೀಮ್‌ನ ಕೇಶವ ಕಟೀಲು ಮತ್ತಿತರರು ಉಪಸ್ಥಿತರಿದ್ದರು. ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-06081304

Comments

comments

Comments are closed.

Read previous post:
Kinnigoli-06081303
ಕಿನ್ನಿಗೋಳಿ- ವಾರ್ಷಿಕ ಮಹಾಸಭೆ

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಹಾಗೂ ಸ್ಪರ್ಧಾ ಯುಗದಲ್ಲಿ ಆಧುನಿಕತೆಯ ಜೊತೆಗೆ ಹೊಸ ಆವಿಷ್ಕಾರ, ತಾಂತ್ರಿಕತೆಯನ್ನು ಕುಶಲಕರ್ಮಿಗಳು ಮೈಗೂಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಮಂಗಳೂರು ಸಹ್ಯಾದ್ರಿ ಆಡಳಿತ...

Close