ರೋಟರಿ ಶಾಲಾ : ಶಿಕ್ಷಕ ರಕ್ಷಕ ಸಭೆ

ಕಿನ್ನಿಗೋಳಿ: ಪೋಷಕರು ಮಕ್ಕಳಿಂದ ಕೇವಲ ಅಂಕಗಳನ್ನು ಮಾತ್ರ ನಿರೀಕ್ಷಿಸದೆ, ಅವರಲ್ಲಿ ನಿಜವಾದ ಸಾಮರ್ಥ್ಯ, ಜೀವನ ಕೌಶಲ್ಯ ಬೆಳೆಸಿ ಮತ್ತು ಮೌಲ್ಯಧಾರಿತ ಶಿಕ್ಷಣ ಕೊಡಿಸಬೇಕು. ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಶಿಕ್ಷಕರು, ಪೋಷಕರು ಗುರುತಿಸಿ, ಅವರಲ್ಲಿ ಆತ್ಮಸ್ಥೈರ್ಯ ಮತ್ತು ಧೈರ್ಯ ತುಂಬಿ ಅವರ ಏಳಿಗೆಗಾಗಿ ಶ್ರಮ ವಹಿಸಬೇಕು ಎಂದು ಮಂಗಳೂರಿನ ಸ್ವ-ರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಹೇಳಿದರು
ಶನಿವಾರ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಿಕ್ಷಕ ರಕ್ಷಕ ಸಂಘದ ಮಹಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರುಸಾರಿಯೋ, ಶಾಲಾ ಕಾರ್ಯದರ್ಶಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಎಚ್. ಸತೀಶ್ಚಂದ್ರ ಹೆಗ್ಡೆ, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಗಿಲ್ಬಟ್ ಡಿಸೋಜ ಸ್ವಾಗತಿಸಿ, ಶಿಕ್ಷಕ ಸೂರ್ಯಕಾಂತ್ ನಾಯಕ್ ವಂದಿಸಿದರು. ದೈಹಿಕ ಶಿಕ್ಷಕ ಪ್ರಣೀಲ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Kinnigoli-06081301

Comments

comments

Comments are closed.

Read previous post:
Kinnigoli-05081305
ಮೂಲ್ಕಿ: ವಿದ್ಯಾರ್ಥಿ ವೇತನ

Bhagyavan Sanil ಮೂಲ್ಕಿ: ಮೂಲ್ಕಿ ಗೌಡ ಸಾರಸ್ವತ ಬಡ ವಿದ್ತಾರ್ಥಿ ಫಂಡ್ ಆಶ್ರಯದಲ್ಲಿ ಅವಿಭಜಿತದಕ್ಷಿಣಕನ್ನಡದ ಅರ್ಹ 197 ವಿದ್ಯಾರ್ಥಿಗಳಿಗೆ 2ಲಕ್ಷ 70ಸಾವಿರ ರೂ ವೆಚ್ಚದಲ್ಲಿ ವಿದ್ಯಾರ್ಥಿ ವೇತನ...

Close