ಎಸ್.ಕೋಡಿ : ಆಟಿ ಆಚರಣೆ

ಕಿನ್ನಿಗೋಳಿ : ಹಿಂದಿನ ಕಾಲದ ಹಳೆ ಕಟ್ಟುಪಾಡುಗಳನ್ನು ಮೂಡನಂಬಿಕೆ ಅಂತ ಪರಿಗಣಿಸದೆ ಇಂದಿನ ಯುವಜನತೆ ಮುಂದುವರಿಸಬೇಕು. ಆಚರಣೆಗೆ ವೈಜ್ಞಾನಿಕ ಮಹತ್ವಗಳಿವೆ. .ಹಿಂದಿನ ಆಚರಣೆಗಳು ಯುವಜನತೆಯಿಂದ ದೂರವಾಗುತ್ತಿದೆ. ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳನ್ನು ನೆನಪಿಸುವ ಕಾರ್ಯ ಮಾಡಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಕಾಮಿನಿ ಜೆ. ಶೆಟ್ಟಿ ಹೇಳಿದರು
ಎಸ್.ಕೋಡಿ ಸಂಗಮ ಮಹಿಳಾ ಹಾಗೂ ಯುವತಿ ಮಂಡಲ ಆಶ್ರಯದಲ್ಲಿ ಎಸ್.ಕೋಡಿ ಅಂಗನವಾಡಿ ಸಭಾ ಭವನದಲ್ಲಿ ಶನಿವಾರ ನಡೆದ ಆಟಿದ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಮಹಿಳಾ ವೇದಿಕೆ ಅಧ್ಯಕ್ಷೆ ನಂದಾ ಪಾಯಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೊ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಗಂಧಿ ಕೊಂಡಾಣ, ಸಂಗಮ ಮಹಿಳಾ ಮಂಡಲದ ನೂತನ ಅಧ್ಯಕ್ಷೆ ದಮಯಂತಿ ಕಿನ್ನಿಗೋಳಿ ರೋಟರ‍್ಯಾಕ್ಟ್ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಕೆಂಚನಕೆರೆ ಉಪಸ್ಥಿತರಿದ್ದರು.
ಆಶಾ ಸ್ವಾಗತಿಸಿ ಪ್ರಮೀಳಾ ವಂದಿಸಿದರು. ಶಶಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-06081305

Comments

comments

Comments are closed.