ಕಿನ್ನಿಗೋಳಿ- ವಾರ್ಷಿಕ ಮಹಾಸಭೆ

ಕಿನ್ನಿಗೋಳಿ: ಇಂದಿನ ಯಾಂತ್ರಿಕ ಹಾಗೂ ಸ್ಪರ್ಧಾ ಯುಗದಲ್ಲಿ ಆಧುನಿಕತೆಯ ಜೊತೆಗೆ ಹೊಸ ಆವಿಷ್ಕಾರ, ತಾಂತ್ರಿಕತೆಯನ್ನು ಕುಶಲಕರ್ಮಿಗಳು ಮೈಗೂಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಮಂಗಳೂರು ಸಹ್ಯಾದ್ರಿ ಆಡಳಿತ ಮಹಾವಿದ್ಯಾಲಯದ ನಿರ್ದೇಶಕ ಡಾ| ಅನಂತಪದ್ಮನಾಭ ಆಚಾರ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಸರಾಫ್ ಅಣ್ಣಯಾಚಾರ್ಯ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ಸ್ವರ್ಣೋದ್ಯಮ ಹಿತರಕ್ಷಣಾ ವೇದಿಕೆ (ಕಿನ್ನಿಗೋಳಿ-ಮುಲ್ಕಿ – ಹಳೆಯಂಗಡಿ ವಲಯ) ಪ್ರಥಮ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ದ.ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ನಾಗರಾಜ ಆಚಾರ್ಯ ಮಂಗಳಾದೇವಿ, ಕಿನ್ನಿಗೋಳಿ ಸ್ವರ್ಣೋದ್ಯಮ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಬಿ. ಸೂರ್ಯ ಕುಮಾರ್ ಹಳೆಯಂಗಡಿ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಕೋಶಾಧಿಕಾರಿ ಹರೀಶ್ ಆಚಾರ್ಯ ಉಪಸ್ಥಿತರಿದ್ದರು.
ಕಿನ್ನಿಗೋಳಿ ಸ್ವರ್ಣೋದ್ಯಮ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪಿ. ಜಗದೀಶ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಕುಮಾರ್ ವಾರ್ಷಿಕ ಲೆಕ್ಕಪತ್ರ ಮತ್ತು ವರದಿ ನೀಡಿದರು. ವಾಚಿಸಿದರು. ಏಳಿಂಜೆ ಭಾಸ್ಕರ ಆಚಾರ್ಯ ವಂದಿಸಿದರು. ಎಂ. ಆರ್. ನಾಗರಾಜ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-06081303

Comments

comments

Comments are closed.

Read previous post:
Kinnigoli-06081302
ಯಕ್ಷಲಹರಿ ತಾಳಮದ್ದಲೆ ಸಮಾರೋಪ

ಕಿನ್ನಿಗೋಳಿ: ಯಕ್ಷಗಾನ ಕಲೆಯು ಶಾಸ್ತ್ರೀಯ ಶಿಸ್ತುಬದ್ಧ ವೈಶಿಷ್ಟ ಫೂರ್ಣ ಕಲಾ ಪ್ರಕಾರ. ಯುವಜನರಲ್ಲಿ ಈ ಕಲೆಯ ಆಸಕ್ತಿ ಸದಭಿರುಚಿ ಬರುವಂತೆ ವಾತಾವರಣ ಕಲ್ಪಿಸಬೇಕು ಎಂದು ಬೆಂಗಳೂರು ಇಂಡಿಯನ್ ಓವರಸೀಸ್...

Close