ಯಕ್ಷಲಹರಿ ತಾಳಮದ್ದಲೆ ಸಮಾರೋಪ

ಕಿನ್ನಿಗೋಳಿ: ಯಕ್ಷಗಾನ ಕಲೆಯು ಶಾಸ್ತ್ರೀಯ ಶಿಸ್ತುಬದ್ಧ ವೈಶಿಷ್ಟ ಫೂರ್ಣ ಕಲಾ ಪ್ರಕಾರ. ಯುವಜನರಲ್ಲಿ ಈ ಕಲೆಯ ಆಸಕ್ತಿ ಸದಭಿರುಚಿ ಬರುವಂತೆ ವಾತಾವರಣ ಕಲ್ಪಿಸಬೇಕು ಎಂದು ಬೆಂಗಳೂರು ಇಂಡಿಯನ್ ಓವರಸೀಸ್ ಬ್ಯಾಂಕ್ ಉಪ ಮಹಾಪ್ರಬಂಧಕ ಕೆ ಅನಿಲ್ ಹೇಳಿದರು
ಯಕ್ಷಲಹರಿ, ಯುಗಪುರುಷ ಕಿನ್ನಿಗೋಳಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿ, ಕರ್ನಾಟಕ ಸರಕಾರ, ಬೆಂಗಳೂರು ಇವರ ಸಹಯೋಗದಲ್ಲಿ ಮತ್ತು ಕರ್ಣಾಟಕ ಬ್ಯಾಂಕ್(ಲಿ) ಮಂಗಳೂರು ಪ್ರಾಯೋಜಕತ್ವದಲ್ಲಿ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ನಡೆದ “ಸಾಹಸೇ ಶ್ರೀಃ ಪ್ರತಿವಸತಿ” ಯಕ್ಷಗಾನ ತಾಳಮದ್ದಲೆ ಸಪ್ತಾಹದ ಸಮಾರೋಪ ಹಾಗೂ ಯಕ್ಷಲಹರಿಯ ಇಪ್ಪತ್ತಮೂರನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಮಂಗಳೂರು ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಜೈರಾಮ್ ಹಂದೆ ಮಾತನಾಡಿ “ಕವಿಕಲ್ಪನೆಗೆ ಸರಿಸಾಟಿಯಾದ ಅನನ್ಯ ಚಿತ್ರಣಗಳನ್ನು ನೀಡಿ ತಾವು ನಿರ್ವಹಿಸುವ ಪಾತ್ರಕ್ಕೆ ಜೀವ ತುಂಬಿ ಸಾಂದರ್ಭಿಕವಾಗಿ ವೈವಿಧ್ಯಮಯ ಸೌಂದರ್ಯವನ್ನು ತುಂಬಬಲ್ಲವರೇ ಕಲಾವಿದರು ಅಥವಾ ಅರ್ಥಧಾರಿಗಳು ಎಂದು ಹೇಳಿದರು.

ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಶುಭಾಶಂಸನೆಗೈದರು.
ಹವ್ಯಾಸಿ ಯಕ್ಷಗಾನ ಕಲಾವಿದ ಬೆಳ್ಮಣ್ಣು ವಿಶ್ವನಾಥ ಅಡ್ಯಂತಾಯ ಅವರನ್ನು ಕಲಾವಿದರ ನೆಲೆಯಲ್ಲಿ ಸನ್ಮಾನಿಸಲಾಯಿತು. ಮಂಗಳೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೀಜನಲ್ ಮೆನೇಜರ್ ರಘುರಾಮ ಶೆಟ್ಟಿ, ಉದ್ಯಮಿ ರಮೇಶ್ ಎಲ್.ಕುಂದರ್ ಹಾಗೂ ನಮ್ಮ ಕುಡ್ಲ (ವಿ೪ ಮೀಡಿಯಾ ನೆಟ್ ವಕ್ ) ನ ಲೀಲಾಕ್ಷ ಕರ್ಕೇರ ಅವರನ್ನು ವಿಶೇಷ ಗೌರವಾರ್ಪಣೆ ಮಾಡಲಾಯಿತು. ಮುಂಬಯಿ ಉದ್ಯಮಿ ತಾಳಿಪಾಡಿಗುತ್ತು ಧನಪಾಲ ಶೆಟ್ಟಿ ಅವರನ್ನು ಕಲಾಪೋಷಕ ನೆಲೆಯಲ್ಲಿ ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದರ ಅರ್ಹ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮುಂಬೈ ಉದ್ಯಮಿ ಅನಿಲ್ ಶೆಟ್ಟಿ ಏಳಿಂಜೆ ಕೋಂಜಾಲಗುತ್ತು , ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ, ವಿಶ್ವ ಬಂಟರ ಒಕ್ಕೂಟದ ಐಕಳ ಹರೀಶ್ ಶೆಟ್ಟಿ, ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಮಂಗಳೂರು ಕಾರ್ಪೊರೇಶನ್ ಬ್ಯಾಂಕ್ ಉಪ ಮಹಾ ಪ್ರಬಂಧಕ ಡಿ.ಎಮ್. ಮಜುಂದಾರ್, ಸಗ್ರಿ ವಾಸುಕೀ ಸುಬ್ರಮಹ್ಮಣ್ಯ ದೇವಸ್ಥಾನ ಧರ್ಮದರ್ಶಿ ವೆ|ಮೂ| ಗೋಪಾಲಕೃಷ್ಣ ಸಾಮಗ,ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ. ಲಕ್ಷ್ಮೀ ನಾರಾಯಣ ಸಾಮಗ, ಅತ್ತೂರು ಬೈಲು ಮಹಾಗಣಪತಿ ಮಂದಿರ ಅರ್ಚಕ ವೆಂಕಟರಾಜ ಉಡುಪ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಧನ ಅರ್ಚಕ ಕಾವೂರು ಶ್ರೀನಿವಾಸ ಭಟ್, ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ, ಮುಂಬೈ ಉದ್ಯಮಿ ರತ್ನ ಎಸ್.ಕೋಟ್ಯಾನ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರುಸಾರಿಯೋ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಯಕ್ಷಲಹರಿ ಉಪಾಧ್ಯಕ್ಷ ಪಿ.ಸತೀಶ್ ರಾವ್ ಉಪಸ್ಥಿತರಿದ್ದರು.
ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ್ ಡಿ.ಎಸ್. ವಂದಿಸಿದರು. ಡಾ|. ಎಂ. ರಾಧಕೃಷ್ಣ ಭಟ್ ಪೆರ್ಲ ಹಾಗೂ ವಸನ್ತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Kinnigoli-06081302

Comments

comments

Comments are closed.

Read previous post:
Kinnigoli-06081301
ರೋಟರಿ ಶಾಲಾ : ಶಿಕ್ಷಕ ರಕ್ಷಕ ಸಭೆ

ಕಿನ್ನಿಗೋಳಿ: ಪೋಷಕರು ಮಕ್ಕಳಿಂದ ಕೇವಲ ಅಂಕಗಳನ್ನು ಮಾತ್ರ ನಿರೀಕ್ಷಿಸದೆ, ಅವರಲ್ಲಿ ನಿಜವಾದ ಸಾಮರ್ಥ್ಯ, ಜೀವನ ಕೌಶಲ್ಯ ಬೆಳೆಸಿ ಮತ್ತು ಮೌಲ್ಯಧಾರಿತ ಶಿಕ್ಷಣ ಕೊಡಿಸಬೇಕು. ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು...

Close