ಮುಲ್ಕಿ ಬಂಟರ ಸಂಘ: ಆಟಿಡೊಂಜಿ ದಿನ

ಕಿನ್ನಿಗೋಳಿ : ಹಿಂದೆ ಆಷಾಡ ತಿಂಗಳು ಕಷ್ಟದ ತಿಂಗಳಾಗಿದ್ದು, ವಿಪರೀತ ಮಳೆಯಿಂದ ಜನರು ರೋಗ ರುಜಿನಗಳಿಗೆ ಒಳಗಾಗುತ್ತಿದ್ದರು ಈ ತಿಂಗಳ ಆಹಾರ ಪದ್ದತಿಯಿಂದ ರೋಗವನ್ನು ಉಪಶಮನ ಮಾಡುತ್ತಿದ್ದರು. ಹಿಂದೆ ಇದ್ದಂತಹ ಅವಿಭಕ್ತ ಕುಟುಂಬಗಳು ಈಗ ವಿಭಕ್ತ ಕುಟುಂಬಗಳಾಗಿದೆ. ಈ ವ್ಯವಸ್ಥೆಗೆ ಪ್ರಮುಖ ಕಾರಣ ಮೂಲ ಸಂಸ್ಕೃತಿ ನಾಶ. ಸಂಸ್ಕಾರಯುತ ಶಿಕ್ಷಣದ ಕೊರತೆ. ಇದಕ್ಕೆಲ್ಲಾ ಪರಿಹಾರವಾಗಿ ಮನೆಯಲ್ಲಿ ತಂದೆ-ತಾಯಂದಿರು ಮಕ್ಕಳಿಗೆ ಸಮಾಜದಲ್ಲಿ ಬದುಕುವ ಸಂಸ್ಕಾರಯುತ ಜೀವನ ಹಾಗೂ ನೀತಿಪಾಠ ಬೋಧಿಸುವ ಅವಶ್ಯಕತೆಯಿದೆ ಎಂದು ವಿಜಯಲಕ್ಷ್ಮೀ ಹೇಳಿದರು.
ಮುಲ್ಕಿ ಬಂಟರ ಸಂಘ ಮಹಿಳಾ ವಿಭಾಗ ಆಶ್ರಯದಲ್ಲಿ ಪುನರೂರು ನಾಗವೀಣಾ ಸಭಾಂಗಣದಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಲ್ಕಿ ಬಂಟರ ಸಂಘ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಮೆನ್ನಬೆಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ ಮುಲ್ಕಿ ಬಂಟರ ಸಂಘ ಮಹಿಳಾ ವಿಭಾಗ ಕಾರ್ಯದಶಿ ರೋಹಿಣಿ ಶೆಟ್ಟಿ ಉಪಸ್ಥಿತರಿದ್ದರು. .
ಮುಲ್ಕಿ ಬಂಟರ ಸಂಘ ಮಹಿಳಾ ವಿಭಾಗ ಅಧ್ಯಕ್ಷೆ ಶಮಿನಾ ಶೆಟ್ಟಿ ಸ್ವಾಗತಿಸಿ ಬಬಿತಾ ಶೆಟ್ಟಿ ವಂದಿಸಿದರು. ಮಲ್ಲಿಕಾ ಪೂಂಜಾ ಕಾರ್ಯಕ್ರಮ ನಿರೂಪಿಸಿದರು.

Kinnigoli-06081308

Kinnigoli-06081309

Comments

comments

Comments are closed.

Read previous post:
Kinnigoli-06081307
ಕೊಂಡೆಮೂಲ-ನಡುಗೋಡು: ಆಟಿಡೊಂಜಿ ಕೂಟ

ಕಿನ್ನಿಗೋಳಿ: ಪಾರಂಪರಿಕವಾಗಿ ಬಂದಂತಹ ಆಚರಣೆ, ಆಹಾರ ಪದ್ಧತಿಗಳು ನಗರೀಕರಣದ ಪ್ರಭಾವದಿಂದಾಗಿ ಹಿಂದಿನ ಪದ್ಧತಿಗಳು ಕಣ್ಮರೆಯಾಗುತ್ತಿದೆ ತುಳು ಸಂಸ್ಕೃತಿಯ ಒಂದೊಂದೆ ಬೇರುಗಳು ನಾಶವಾಗುವ ಈ ಸಮಯದಲ್ಲಿ ವರ್ಷಕ್ಕೊಮ್ಮೆಯಾದರೂ ಇದನ್ನು ಸ್ಮರಿಸಿದರೆ...

Close