ಗುತ್ತಕಾಡು : ಉಚಿತ ಶೂ ವಿತರಣೆ

ಕಿನ್ನಿಗೋಳಿ : ಹಳ್ಳಿ ಶಾಲೆ, ಕನ್ನಡ ಮಾಧ್ಯಮ ಎಂಬ ಕೀಳರಿಮೆ ಬೇಡ ಈ ಮಾಧ್ಯಮದಲ್ಲಿ ಕಲಿತವರೂ ಉತ್ತಮ ಪ್ರತಿಭಾವಂತರಾಗಿದ್ದಾರೆ ಎಂದು ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಂಗಳವಾರ ಅವರು ಪ್ರಾಯೋಜಿಸಿದ ಉಚಿತ ಶೂ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ ಕೃಷ್ಣ ಸಾಲ್ಯಾನ್, ಕಾರ್ಯದರ್ಶಿ ಪ್ರಾನ್ಸಿಸ್ ಸೆರಾವೊ, ಪುರುಷೋತ್ತಮ ಶೆಟ್ಟಿ, ವೈ ಯೋಗೀಶ್ ರಾವ್, ಲಾರೆನ್ಸ್ ಪೆರ್ನಾಂಡೀಸ್, ನಾಗೇಶ್, ಸಂಶುದ್ದೀನ್ ಉಪಸ್ಥಿತರಿದ್ದರು.
ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಉಷಾರಾಮದಾಸ್ ಸ್ವಾಗತಿಸಿ ಶಿಕ್ಷಕ ಹರಿ ರಾವ್ ವಂದಿಸಿದರು. ಅನುರಾಧ ಕಾರ್ಯಕ್ರಮ ನಿರೂಪಿಸಿದರು.

Kinnigoli-07081305

Comments

comments

Comments are closed.

Read previous post:
Kinnigoli-07081304
ಕಿನ್ನಿಗೋಳಿ ರೋಟರಿ : ಆಟಿ ಆಚರಣೆ

ಕಿನ್ನಿಗೋಳಿ : ಸಮಾಜ ಸಂಸ್ಕೃತಿ, ಆಚರಣೆಗಳಿಂದ ದೂರವಾಗಬಾರದು. ಇತ್ತೀಚಿನ ದಿನಗಳಲ್ಲಿ ಆಚಾರ ವಿಚಾರ ವ್ಯಾವಹಾರಿಕವಾಗಿರುವುದು ವಿಷಾದನೀಯ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಅನುಭವಿಸಲು ವೈಜ್ಞಾನಿಕ ಮತ್ತು ವೈದ್ಯಕೀಯ ಮಹತ್ವವುಳ್ಳ ಆಟಿ...

Close