ಕಿನ್ನಿಗೋಳಿ ರೋಟರಿ : ಆಟಿ ಆಚರಣೆ

ಕಿನ್ನಿಗೋಳಿ : ಸಮಾಜ ಸಂಸ್ಕೃತಿ, ಆಚರಣೆಗಳಿಂದ ದೂರವಾಗಬಾರದು. ಇತ್ತೀಚಿನ ದಿನಗಳಲ್ಲಿ ಆಚಾರ ವಿಚಾರ ವ್ಯಾವಹಾರಿಕವಾಗಿರುವುದು ವಿಷಾದನೀಯ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಅನುಭವಿಸಲು ವೈಜ್ಞಾನಿಕ ಮತ್ತು ವೈದ್ಯಕೀಯ ಮಹತ್ವವುಳ್ಳ ಆಟಿ ಆಚರಣೆ ಸೂಕ್ತ. ಮೂಡನಂಬಿಕೆ ಸಲ್ಲದು ಮೂಲನಂಬಿಕೆ ಇರಬೇಕು ಎಂದು ಜಾನಪದ ಕಲಾವಿದ ದಯಾನಂದ ಕತ್ತಲಸಾರ್ ಹೇಳಿದರು.
ಕಿನ್ನಿಗೋಳಿ ಸಹಕಾರ ಸೌಧದಲ್ಲಿ ಸೋಮವಾರ ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್ ಹಾಗೂ ರೋಟರಾಕ್ಟ್ ಕ್ಲಬ್ ಜಂಟೀ ಆಶ್ರಯದಲ್ಲಿ ನಡೆದ ಆಟಿ ಆಚರಣೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ರೋಟರಿ ಜಿಲ್ಲೆ ೩೧೮೦ ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ, ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಜೊಕಿಂ ಸಿಕ್ವೇರಾ, ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರುಸಾರಿಯೊ ಸ್ವಾಗತಿಸಿದರು. ರೋಟರಾಕ್ಟ್ ಅಧ್ಯಕ್ಷ ಪ್ರಣಿಲ್ ಹೆಗ್ಡೆ ವಂದಿಸಿದರು.

Kinnigoli-07081303

Kinnigoli-07081304

Comments

comments

Comments are closed.

Read previous post:
Kinnigoli-07081302
ಸಂಕಲಕರಿಯ ತಿಂಗೊಲ್ದ ಬೊಲ್ಪು

Sharath Shetty ಬೆಳ್ಮಣ್: ನಮ್ಮ ತುಳುನಾಡಿನ ಆಚರಣೆ, ಪದ್ಧತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ನಡೆಸುವ ಆಟಿ ತಿಂಗಳ ವಿಶೇಷ ಕಾರ್ಯಕ್ರಮಗಳು ಅರ್ಥಪೂರ್ಣವೆಂದು...

Close