ಸಂಕಲಕರಿಯ ತಿಂಗೊಲ್ದ ಬೊಲ್ಪು

Sharath Shetty
ಬೆಳ್ಮಣ್: ನಮ್ಮ ತುಳುನಾಡಿನ ಆಚರಣೆ, ಪದ್ಧತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ನಡೆಸುವ ಆಟಿ ತಿಂಗಳ ವಿಶೇಷ ಕಾರ್ಯಕ್ರಮಗಳು ಅರ್ಥಪೂರ್ಣವೆಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಾದನ ಕಲಾವಿದ, ರಂಗಕರ್ಮಿ ಮೂಲ್ಕಿ ಚಂದ್ರಶೇಖರ ಸುವರ್ಣ ಹೇಳಿದರು.
ಸಂಕಲಕರಿಯ ಶಾಲೆಯಲ್ಲಿ ಸ್ಥಳೀಯ ವಿಜಯಾ ಯುವಕ ಸಂಘ, ಖುಷಿ ಮಹಿಳಾ ಮತ್ತು ಯುವತಿಮಂಡಲ, ಕಿನ್ನಿಗೋಳಿಯ ರೋಟರಾಕ್ಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಯುಗಪುರುಷದ ಪ್ರಾಯೋಜಕತ್ವದಲ್ಲಿ ಬಾನುವಾರ ನಡೆದ ಆಗಸ್ಟ್ ತಿಂಗಳ ತಿಂಗೊಲ್ದ ಬೊಲ್ಪು ಕಾರ್ಯಕ್ರಮದ ಸಂದರ್ಭ ಆಟಿದ ಅಟಿಲ್ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಆಧ್ಯಕ್ಷತೆ ವಹಿಸಿದ್ದು, ದ್ವಿತೀಯ ಪಿಯುಸಿ ಯಲ್ಲಿ ೯೧ ಶೇಕಡಾ ಅಂಕ ಗಳಿಸಿದ ಸ್ಥಳೀಯ ಪ್ರತಿಭೆ ಲೋಯ್ಸ್ ರನ್ನು ಸಮ್ಮಾನಿಸಲಾಯಿತು. ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಹೇಮನಾಥ ಶೆಟ್ಟಿ, ಸಂಚಾಲಕಿ ಶಾರದಾ ಹೇಮನಾಥ ಶೆಟ್ಟಿ, ಯುವಕ ಸಂಘದ ಗೌರವಾಧ್ಯಕ್ಷ ಭಾಸ್ಕರ ಶೆಟ್ಟಿ, ರೋಟರ‍್ಯಾಕ್ಟ್ ನಿಕಟಪೂರ್ವಾಧ್ಯಕ್ಷ ರಾಜೇಶ್ ಕೆಂಚನಕೆರೆ, ಮಹಿಳಾ ಮಂಡಲದ ಆಧ್ಯಕ್ಷೆ ಬೇಬಿ ಶೆಟ್ಟಿ, ಕಾರ್ಯದರ್ಶಿ ಸರಳಾ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಬಾಬು ಶೆಟ್ಟಿ, ಸುಧಾಕರ ಸಾಲ್ಯಾನ್, ಸುರೇಶ್ ಶೆಟ್ಟಿ, ಸುರೇಶ್ ಭಂಡಾರಿ, ಅಶೋಕ್ ಶೆಟ್ಟಿ, ಶಿವಾನಂದ ಕುಲಾಲ್ ಮತ್ತಿತರರಿದ್ದರು. ಯುವಕ ಸಂಘದ ಅಧ್ಯಕ್ಷ ವಿಶ್ವಿತ್ ಶೆಟ್ಟಿ ವಂದಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲ ಹಾಗೂ ಯುವಕ ಮಂಡಳದ ಸದಸ್ಯರು ತಯಾರಿಸಿದ ಆಟಿದ ಅಟಿಲ್‌ನ ವಿಶೇಷ ಭೋಜನ ನಡೆಯಿತು.

Kinnigoli-07081302

Comments

comments

Comments are closed.

Read previous post:
Kinnigoli-07081301
ನಿಟ್ಟೆ ರೋಟರಿಗೆ ಜಿಲ್ಲಾ ಗವರ್ನರ್ ಭೇಟಿ

Sharath Shetty ಬೆಳ್ಮಣ್: ಸಾಮಾಜಿಕ ಕಾರ್ಯಗಳಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಬೆಳೆಸಿದಾಗ ಸಂಘಟನೆಗಳು ಬಲಗೊಳ್ಳುತ್ತವೆ. ಸದಸ್ಯರಲ್ಲಿ ಬದಲಾವಣೆಗಳನ್ನು ತರುವುದೇ ಅಭಿವೃದ್ಧಿಗೆ ಮೂಲ ಎಂದು ರೋಟರಿ ಜಿಲ್ಲಾ ಗವರ್ನರ್ ಎಸ್.ಗುರುರಾಜ್...

Close