ನಿಟ್ಟೆ ರೋಟರಿಗೆ ಜಿಲ್ಲಾ ಗವರ್ನರ್ ಭೇಟಿ

Sharath Shetty
ಬೆಳ್ಮಣ್: ಸಾಮಾಜಿಕ ಕಾರ್ಯಗಳಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಬೆಳೆಸಿದಾಗ ಸಂಘಟನೆಗಳು ಬಲಗೊಳ್ಳುತ್ತವೆ. ಸದಸ್ಯರಲ್ಲಿ ಬದಲಾವಣೆಗಳನ್ನು ತರುವುದೇ ಅಭಿವೃದ್ಧಿಗೆ ಮೂಲ ಎಂದು ರೋಟರಿ ಜಿಲ್ಲಾ ಗವರ್ನರ್ ಎಸ್.ಗುರುರಾಜ್ ಹೇಳಿದರು.
ಅವರು ಶನಿವಾರ ನಿಟ್ಟೆ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ, ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಸಂಜೆ ನಿಟ್ಟೆ ತಾಂತ್ರಿಕ ಕಾಲೇಜಿನ ಸಂಭ್ರಮ ಹಾಲ್‌ನಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ. ಸಾಮಾನ್ಯ ಸದಸ್ಯರನ್ನು ರೊಟೇರಿಯನ್ ಆಗಿ ಪರಿವರ್ತಿಸುವುದೇ ಸದಸ್ಯತನ ಅಭಿವೃದ್ಧಿ ಎಂದರು.
ನಿಟ್ಟೆ ರೋಟರಿ ಅಧ್ಯಕ್ಷ ಎನ್.ಅರವಿಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದು , ಪರಪ್ಪಾಡಿ ಅಂಗನವಾಡಿ ಕೇಂದ್ರಕ್ಕೆ ವಾಟರ್ ಫಿಲ್ಟರ್ ನೀಡಲಾಯಿತು. ವಲಯ ಸಹಾಯಕ ಗವರ್ನರ್ ಮಾಧವ ಸುವರ್ಣ, ವಲಯ ಸೇನಾನಿ ಹರಿಪ್ರಕಾಶ್ ಶೆಟ್ಟಿ, ಸಮಾರಂಭದಲ್ಲಿ ರೋಟರಿ ಜಿಲ್ಲಾ ಪ್ರಥಮ ಮಹಿಳೆ ಪುಷ್ಪಾಗುರುರಾಜ್, ಹಿರಿಯ ರೊಟೇರಿಯನ್ ಜಿ.ಆರ್.ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಷ್ಣುಮೂರ್ತಿ ರಾವ್ ವರದಿ ನೀಡಿ, ಯೋಗೀಶ್ ಹೆಗ್ಡೆ, ಎನ್ .ಪಾಂಡುರಂಗ ಶೆಟ್ಟಿ ಪರಿಚಯಿಸಿದರು. ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07081301

Comments

comments

Comments are closed.

Read previous post:
Kinnigoli-06081315
ಚರಂಡಿಗೆ ಇಳಿದ ಬಸ್

ಕಿನ್ನಿಗೋಳಿ : ರಸ್ತೆಯಲ್ಲಿ ತುಂಬಿದ್ದ ನೀರಿನ ಪರಿಣಾಮ ಖಾಸಗಿ ಕಾಲೇಜು ಬಸ್ಸು ಸೋಮವಾರ ಸಂಜೆ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದಾಮಸ್ ಕಟ್ಟೆ ಚರ್ಚ್ ಬಳಿ ಚರಂಡಿಗೆ ಇಳಿದಿದೆ....

Close