ಶಿಕ್ಷಣ ವೃತ್ತಿಯ ಮೌಲ್ಯ ವೃದ್ದಿಸಿ

ಕಿನ್ನಿಗೋಳಿ : ಭವಿಷ್ಯದ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರು ಸಂಘಟಿತರಾಗಿ ತಮ್ಮ ಶಿಕ್ಷಣ ವೃತ್ತಿಯಲ್ಲಿನ ಮೌಲ್ಯವನ್ನು ಎತ್ತಿ ಹಿಡಿಯಲು ಶಿಕ್ಷಕರ ಆಂತರಿಕ ಸಹಕಾರಿ ಸಂಘಗಳು ಉತ್ತಮ ವೇದಿಕೆ ಎಂದು ಪೊಂಪೈ ಕಾಲೇಜು ಪ್ರಾಂಶುಪಾಲ ಡಾ| ಜಾನ್ ಕ್ಲಾರೆನ್ಸ್ ಮಿರಾಂದ ಹೇಳಿದರು.
ಕಿನ್ನಿಗೋಳಿ ಬಳಿಯ ಐಕಳ ಪೊಂಪೈ ಪದವಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಐಕಳ ಶಿಕ್ಷಕರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸಹಕಾರಿ ಸಂಘದ ಅಧ್ಯಕ್ಷ ರೋಕಿ. ಜಿ. ಲೋಬೊ ಅಧ್ಯಕ್ಷತೆಯನ್ನು ವಹಿಸಿದ್ದರು.ಐಕಳ ಪೊಂಪೈ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಪ್ಯಾಟ್ರಿಕ್ ಮಿನೇಜಸ್ , ಲಿಟ್ಲ್ ಫ್ಲವರ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸುಮುಖಾನಂದ ಜಲವಳ್ಳಿ, ಐಕಳದ ಪೊಂಪೈ ಪದವಿ ಪೂರ್ವಕಾಲೇಜು ನಿವೃತ್ತ ಸಿಬ್ಬಂದಿ ಮೋಹನ ಆಚಾರಿ ಅವರನ್ನು ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. 2013-14ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಗಳಿಸಿದ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.
ಪ್ರೋ. ಜಗದೀಶ ಹೊಳ್ಳ ಅಭಿನಂದನಾ ಭಾಷಣ ಮಾಡಿದರು. ಸಂಘದ ಕಾರ‍್ಯದರ್ಶಿ ರೇಷ್ಮಾ ಸೆರಾವೋ, ನಿರ್ದೇಶಕರಾದ ಪುರುಷೋತ್ತಮ ಕೆ.ವಿ., ಡಯಾನ ಮಿನೇಜಸ್, ಬೊನವೆಂಚರ್ ಹೆರಾಲ್ಡ್ ಡಿಸೋಜ, ವಿನ್ನಿಫ್ರೆಡ್ ಮಿನೇಜಸ್, ಆಂಡ್ರ್ಯು ಮಿಸ್ಕಿತ್, ಜೇಮ್ಸ್ ಒಲಿವರ್ ಉಪಸ್ಥಿತರಿದ್ದರು. ಕಿನ್ನಿಗೋಳಿ ಬಳಿಯ ಐಕಳದ ಪಾಂಪೈ ಪದವಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಶಿಕ್ಷಕರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

Kinnigoli-10081319

 

 

Comments

comments

Comments are closed.

Read previous post:
Kinnigoli-10081307
ನಿಡ್ಡೋಡಿ- ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಭೇಟಿ

ಕಿನ್ನಿಗೋಳಿ: ನಿಡ್ಡೋಡಿ ಬಂಗೇರಪದವುನಲ್ಲಿ ಶನಿವಾರ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ತಂಡ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ ವೀಕ್ಷಣೆ ಹಾಗೂ ನಿಡ್ಡೋಡಿ ಪರಿಸರದ ವಸ್ತು...

Close