ಕಟೀಲು ಪ್ರಜ್ಞಾದೀಪ್ತಿ ಪ್ರಶಸ್ತಿ ಪ್ರದಾನ

ಕಟೀಲು : ಭಾಷೆ ಮತ್ತು ವಿಚಾರಗಳ ಶುದ್ಧತೆ ಅರಿತು ವ್ಯವಹರಿಸಬೇಕು, ಪತ್ರಿಕೆಗಳು ಭಾಷೆಯನ್ನು ಅಪಭ್ರಂಶ ಮಾಡಬಾರದು ಇದಕ್ಕೆ ಭಾಷಾ ಜ್ಞಾನ ಬಹು ಮುಖ್ಯ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿದಾರ್ಚಾಯ ಹೇಳಿದರು.
ಶನಿವಾರ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಬಾಷಾ ವಿದ್ವಾಂಸ ಹಾಗೂ ಕಲಾಸಾಧಕರಾದ ವಿದ್ವಾನ್ ದ್ವಿವೇದಿ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ ಪ್ರತಿಷ್ಠಾನದ ಆಶ್ರಯದಲ್ಲಿ ನೀಡುವ ಪ್ರ್ರಜ್ಞಾದೀಪ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು
ಪುರೋಹಿತರು ಸಂಸ್ಕೃತ ಭಾಷೆಯ ಬಗ್ಗೆ ಸ್ಪಷ್ಟ ಭಾಷಾ ಪರಿಜ್ಞಾನವಿಲ್ಲದೆ ಕೇವಲ ಮಂತ್ರ ಶ್ಲೋಕಗಳನ್ನು ಕಂಠಪಾಠ ಮಾಡಿ ಹೇಳುತ್ತಾರೆ. ಪುರೋಹಿತರನ್ನು ತಿದ್ದಿ ಸರಿಯಾದ ಮಾರ್ಗದರ್ಶನ ಕೊಡಬೇಕಾಗಿದೆ. ಭಾಷಣ ಮಾಡಲು ಆತ್ಮಸ್ಥೆರ್ಯ ಬೇಕು. ಕೊರ್ಗಿಯವರು ಭಾಷಾ ಶುದ್ಧತೆ ಹಾಗೂ ಯಕ್ಷಗಾನದ ಬಗ್ಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರನ್ನು ನೆನಪಿಸಿ ಮಾತನಾಡಿದರು.
ಬನ್ನಂಜೆ ಗೋವಿಂದಾಚಾರ್ಯರು ಪ್ರತಿಷ್ಠಾನ ಸಮಿತಿ ನೀಡಿದ ಪ್ರಶಸ್ತಿ ಸ್ವೀಕರಿಸಿ ೨೦ ಸಾವಿರ ರೂ ಕೊಡುಗೆ ಹಣವನ್ನು ಮತ್ತೆ ಪ್ರತಿಷ್ಠಾನಕ್ಕೆ ನೀಡಿದರು.
ಮಣಿಪಾಲದ ಪ್ರಸಿದ್ದ ವೈದ್ಯ ಡಾ| ಭಾಸ್ಕರಾನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಲಾ ವಿಮರ್ಶಕ ಎ. ಈಶ್ವರಯ್ಯ ಅಭಿನಂಧನಭಾಷಣಗೈದರು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ , ಅರ್ಚಕ ಅನಂತಪದ್ಮನಾಭ ಆಸ್ರಣ್ಣ , ಕಟೀಲು ದೇವಳ ಆಡಳಿತಾಧಿಕಾರಿ ಮತ್ತು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಮೇಲುಕೋಟೆ ಸರಕಾರಿ ಸಂಸ್ಕೃತ ಕಾಲೇಜು ಪ್ರಾಧ್ಯಾಪಕ ಉಮಾಕಾಂತ ಭಟ್ಟ ಮೇಲುಕೋಟೆ, ಕಟೀಲು ಮೇಳಗಳ ಯಜಮಾನ ದೇವಿಪ್ರಸಾದ್ ಶೆಟ್ಟಿ, ಡಾ| ಶಶಿ ಕುಮಾರ್ ಕಟೀಲು, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಪಂಜ ಭಾಸ್ಕರ ಭಟ್ಟ ಸ್ವಾಗತಿಸಿ ಪ್ರಸ್ತಾವನೆಗೈದರು. ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ವಂದಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

Kinnigoli-10081320

Comments

comments

Comments are closed.

Read previous post:
Kinnigoli-10081319
ಶಿಕ್ಷಣ ವೃತ್ತಿಯ ಮೌಲ್ಯ ವೃದ್ದಿಸಿ

ಕಿನ್ನಿಗೋಳಿ : ಭವಿಷ್ಯದ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರು ಸಂಘಟಿತರಾಗಿ ತಮ್ಮ ಶಿಕ್ಷಣ ವೃತ್ತಿಯಲ್ಲಿನ ಮೌಲ್ಯವನ್ನು ಎತ್ತಿ ಹಿಡಿಯಲು ಶಿಕ್ಷಕರ ಆಂತರಿಕ ಸಹಕಾರಿ ಸಂಘಗಳು ಉತ್ತಮ ವೇದಿಕೆ ಎಂದು...

Close