ಮೊದಲು ಕುಟುಂಬಕ್ಕೆ ಪ್ರಾಶಸ್ಯ ಮುಖ್ಯ

ಕಿನ್ನಿಗೋಳಿ : ಮೊದಲು ಕುಟುಂಬಕ್ಕೆ ಪ್ರಾಶಸ್ಯ ಕೊಟ್ಟಾಗ ಸಮಾಜ ಸಮುದಾಯಗಳು ತನ್ನಿಂತಾನೆ ಗಟ್ಟಿಗೊಳ್ಳುತ್ತದೆ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಪಾ| ಆಲ್ಫ್ರೆಡ್ ಜೆ. ಪಿಂಟೋ ಹೇಳಿದರು.
ಭಾನುವಾರ ಕಿನ್ನಿಗೋಳಿ ಕೊಸೆಸಾಂವ್ ಚರ್ಚಿನ ಸಭಾ ಭವನದಲ್ಲಿ ನಡೆದ ಲ್ಹಾನ್ ಕ್ರಿಸ್ತಾಂವ್ ಸಮುದಾಯ್ ಕೇಂದ್ರಿಕ್ ಸಮಿತಿಯ ಸಮುದಾಯ ದಿನ ಆಚರಣೆ ಸಂದರ್ಭ ಮಾತನಾಡಿದರು.
ಖ್ಯಾತ ಹಾಸ್ಯ ಕಲಾವಿದ ಕಿನ್ನಿಗೋಳಿ ಮೂಲದ ರಿಚಾರ್ಡ್ ಲೂಯಿಸ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ರಿಚಾರ್ಡ್ ಲೂಯಿಸ್ ಮಾತನಾಡಿ ಎಳವೆಯಲ್ಲಿಯೇ ಮಕ್ಕಳ ಸುಪ್ತ ಪ್ರತಿಭೆಗಳನ್ನು ಪೋಷಕರು ಗುರುತಿಸಿ ತಿದ್ದಿ ತೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮಾತೃ ಭಾಷೆಯ ಬಗ್ಗೆ ಒಲವಿರಬೇಕು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ದಾಯ್ಜಿ ವರ್ಲ್ಡ್ ವೀಕ್ಲಿ ಸಂಪಾದಕ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಹೇಳಿದರು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ವಿನೋದ್ ಲೋಬೊ, ಚರ್ಚ್ ಉಪಾಧ್ಯಕ್ಷ ಲೈನಲ್ ಪಿಂಟೊ, ಕಾರ್ಯದರ್ಶಿ ವಲೇರಿಯನ್ ಸಿಕ್ವೇರಾ ಉಪಸ್ಥಿತರಿದ್ದರು.
ಲ್ಹಾ. ಕ್ರಿ. ಸಮುದಾಯ್ ಕೇಂದ್ರಿಕ್ ಸಮಿತಿ ಸಂಚಾಲಕ ಮೈಕಲ್ ಪಿಂಟೊ ಸ್ವಾಗತಿಸಿ ಪ್ರಸ್ತಾವನೆಗೈದರು, ಜೊತೆ ಕಾರ್ಯದರ್ಶಿ ಸಂಗೀತಾ ಸೆರಾವೋ ವಾರ್ಷಿಕ ವರದಿ ಮಂಡಿಸಿದರು, ಮೇರಿವೆಲ್ ಕಾನ್ವೆಂಟ್‌ನ ಸಿಸ್ಟರ್ ಜಿಲೆಟಾ ಬಿ.ಎಸ್. ವಂದಿಸಿದರು. ಲ್ಹಾ. ಕ್ರಿ. ಸಮುದಾಯ್ ಕೇಂದ್ರಿಕ್ ಸಮಿತಿ ಕಾರ್ಯದರ್ಶಿ ಹೆರಿಕ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10081321

Comments

comments

Comments are closed.

Read previous post:
Kinnigoli-10081315
ವಿವಿಧೆಡೆ ನಾಗರ ಪಂಚಮಿ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಾಗರಪಂಚಮಿ ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ನಾಗರಪಂಚಮಿ  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಾಗರ ಪಂಚಮಿ

Close