ನಿಡ್ಡೋಡಿ- ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಭೇಟಿ

ಕಿನ್ನಿಗೋಳಿ: ನಿಡ್ಡೋಡಿ ಬಂಗೇರಪದವುನಲ್ಲಿ ಶನಿವಾರ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ತಂಡ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ ವೀಕ್ಷಣೆ ಹಾಗೂ ನಿಡ್ಡೋಡಿ ಪರಿಸರದ ವಸ್ತು ಸ್ಥಿತಿಯನ್ನು ಆಳ ಅಧ್ಯಯನ ನಡೆಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ವರದಿ ಸಲ್ಲಿಸಲು ಸ್ಥಳಕ್ಕೆ ಬೇಟಿ ನೀಡಿತ್ತು.
ಕಳೆದ 75ವರ್ಷಗಳಿಂದ ವರ್ಷಕ್ಕೆ ಮೂರು ಬೆಳೆ ಬೇಸಾಯ ಮಾಡುತ್ತಿರುವ ನಿವೃತ್ತ ಅಧ್ಯಾಪಕ ಚಂದಯ್ಯ ಸುವರ್ಣ, ನಿಡ್ಡೋಡಿ ಬಾವದ ದಿನಕರ ಶೆಟ್ಟಿ, ಮೋಹನ್, ಕೃಷಿ ಪ್ರಶಸ್ತಿ ವಿಜೇತ ರಾಮ ಸುವರ್ಣ, ಸದಾನಂದ ಪೂಜಾರಿ, ಅವರ ಕೃಷಿ, ಗದ್ದೆ, ತೋಟ ಅಲ್ಲದೆ ನಿಡ್ಡೋಡಿ, ಕಲ್ಲಮುಂಡ್ಕೂರು, ಅಶ್ವತ ಪುರ, ತೆಂಕ ಮಿಜಾರು, ಹಾಗೂ ಮುಚ್ಚೂರು ಪ್ರದೇಶಗಳನ್ನು ತಂಡ ಬೇಟಿ ನೀಡಿತ್ತು.
ಮುಚ್ಚೂರು ಹೈನುಗಾರಿಕೆಗೆ ಪ್ರಸಿದ್ಧವಾಗಿದ್ದು ಸಾಂದ್ರ ಶಿತಲೀಕರಣ ಕೇಂದ್ರವಿದೆ ಇಲ್ಲಿ ಸುಮಾರು 7 ಹಾಲಿನ ಡೈರಿಗಳ ಹಾಲು ಸಂಗ್ರಹಿಸಲ್ಪಟ್ಟು ಮಂಗಳೂರಿಗೆ ಕಳುಹಿಸಲಾಗುತ್ತಿದೆ. ನಿಡ್ಡೋಡಿ ಪರಿಸರದಲ್ಲಿ ಭತ್ತ, ತೆಂಗು, ಕಂಗು, ಬಾಳೆ, ವೀಳ್ಯೆದೆಲೆ, ಕರಿಮೆಣಸು ಹಾಗೂ ಹೈನುಗಾರಿಕೆ ಪ್ರಮುಖವಾದ ಜನರ ಕಸಬು ಆಗಿದೆ. ಪ್ರಸ್ತಾವಿತ ನಿಡ್ಡೋಡಿ ಸ್ಥಾವರದಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಕೃಷಿ ಭೂಮಿಯಾಗಿದೆ. ಆದರೆ ಕೇಂದ್ರೀಯ ಸಮಿತಿ ಬರಡು ಭೂಮಿ ಎಂದು ತರ್ಕಿಸಿದೆ. ಇದು ಯಾವ ಮಾನ ದಂಡ ಎಂದು ಸ್ಥಳಿಯರಿಗೆ ಗೊತ್ತಾಗುತ್ತಿಲ್ಲ, ಹಲವಾರು ಕಾರ್ನಿಕ ದೇವಸ್ಥಾನ, ದೈವಸ್ಥಾನ, ಚರ್ಚ್‌ಗಳಿದ್ದು ಜನರ ಆರಾಧನ ಕೇಂದ್ರಗಳ ಪುಣ್ಯ ಭೂಮಿಯನ್ನು ಪರಿಸರ ಮಾರಕ ಕೈಗಾರಿಕೆಗೆ ಬಿಟ್ಟು ಕೊಡುವುದಿಲ್ಲ ಎಂದು ಮಾತೃ ಭೂಮಿ ಸಂರಕ್ಷಣಾ ಸಮಿತಿಯವರು ಹೇಳಿದರು.
ಈ ಕೈಗಾರಿಕೆಯ ಬಗ್ಗೆ ಇಲಾಖಾಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದರೂ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಯಾವುದೇ ಮಾಹಿತಿ ಸಿಗಲಿಲ್ಲ, ಪರಿಸರದ ಗ್ರಾಮ ಪಂಚಾಯಿತಿಗಳು ನಿಡ್ಡೋಡಿ ಸ್ಥಾವರದ ವಿರುದ್ಧ ನಿರ್ಣಯ ಮಾಡಿದೆ. ಸ್ಥಾವರ ಆಗದಂತೆ ಕ್ರಮ ಕೈಗೊಳ್ಳ ಬೇಕು ಎಂದು ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೋಕಿಂ ಕೊರೆಯಾ ತಂಡಕ್ಕೆ ವಿನಂತಿಸಿದರು.
15 ದಿವಸಗಳ ಮೊದಲು ಸಂವಹನ ಕೊರತೆ ಹಾಗೂ ಜನರ ಆಕ್ರೋಶದಿಂದಾಗಿ ಸ್ಥಳ ಪರಿಶೀಲನೆ ಮಾಡಲು ಸಾಧ್ಯವಾಗಲಿಲ್ಲ. ನಿಡ್ಡೋಡಿ ಪರಿಸರದ ಜನರಿಗೆ ಭೂಮಿ ಮತ್ತು ಕೃಷಿಯ ಒಲವು ಅತೀಯಾಗಿದ್ದು ಎಲ್ಲೆಡೆ ಹಸಿರು ಪ್ರದೇಶಗಳು ಕಾಣ ಸಿಗುತ್ತಿವೆ. ಇದರ ವಸ್ತು ನಿಷ್ಠ ವರದಿಯನ್ನು ಸಚಿವ ಆಸ್ಕರ್ ಫೆರ್ನಾಂಡಿಸ್ ಅವರಿಗೆ ತಲುಪಿಸುತ್ತೇನೆ ಎಂದು
ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಹೇಳಿದರು.
ಕೆಪಿಸಿಸಿ ದ.ಕ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮಾತೃ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜ, ಸಂಚಾಲಕ ಕಿರಣ್ ಮಂಜನಬೈಲು, ಮಾಜಿ ಅಧ್ಯಕ್ಷ ಪೂವಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

Kinnigoli-10081301

Kinnigoli-10081302

Kinnigoli-10081304

Kinnigoli-10081305

Kinnigoli-10081306

Kinnigoli-10081308

Kinnigoli-10081307

Kinnigoli-10081311

Kinnigoli-10081303

Kinnigoli-10081318

Kinnigoli-10081309

Kinnigoli-10081310

Kinnigoli-10081312

Kinnigoli-10081313

Kinnigoli-10081314

Comments

comments

Comments are closed.

Read previous post:
Kinnigoli-09081308
ಜನನಿ ಮೆಲೋಡಿಸ್ ಕಿನ್ನಿಗೋಳಿ

Close