ನಿಡ್ಡೋಡಿ ಸ್ಥಾವರ ವಿರುದ್ಧ ಉಪಸಮಿತಿಗಳ ಜಂಟೀ ಸಭೆ

ಕಿನ್ನಿಗೋಳಿ: ಮಾತೃ ಭೂಮಿ ಸಂರಕ್ಷಣಾ ಸಮಿತಿ ಹಾಗೂ ನಿಡ್ಡೋಡಿ ಪರಿಸರದ ಗ್ರಾಮ ಪಂಚಾಯಿತಿಗಳ ನಿಡ್ಡೋಡಿ ಉಪಸಮಿತಿ ಪದಾಧಿಕಾರಿಗಳ ಸಭೆ ನಿಡ್ಡೋಡಿ ಬಿಲ್ಲವ ಸಂಘದಲ್ಲಿ ಭಾನುವಾರ ನಡೆಯಿತು.
ಕಿನ್ನಿಗೋಳಿ , ಮೆನ್ನಬೆಟ್ಟು, ಕೆಮ್ರಾಲ್, ಬಳಕುಂಜೆ, ಪಾಲಡ್ಕ, ಪುತ್ತಿಗೆ, ಹೊಸಬೆಟ್ಟು, ಎಕ್ಕಾರು, ಕಲ್ಲಮುಂಡ್ಕೂರು, ತೆಂಕ ಮಿಜಾರು, ಬಡಗ ಮಿಜಾರು ಹಾಗೂ ಮುಚ್ಚೂರು ಗ್ರಾಮಗಳ ನಿಡ್ಡೋಡಿ ಉಳಿಸಿ ಉಪಸಮಿತಿಯ ಪದಾಧಿಕಾರಿಗಳು ಮುಂದಿನ ಹೋರಾಟದ ಬಗ್ಗೆ ರೂಪು ರೇಷೆಗಳ ಸಮಾಲೋಚನೆ ಮಾಡಿದರು.
ಬಡವರು ಐದು ಸೆಂಟ್ಸ್ ಜಾಗ ಕೇಳಿದರೆ ಹಾಗೂ ಸ್ಮಶಾನಕ್ಕಾಗಿ ಜಾಗದ ಮನವಿ ಮಾಡಿದರೆ ಡೀಮ್ಡ್ ಫಾರೆಸ್ಟ್ ಎಂದು ಉತ್ತರ ಬರುತ್ತದೆ. ಇಂತಹ ಕೈಗಾರಿಕೆಗೆ ಹೇಗೆ ಪರವಾನಗಿ ಕೊಡುತ್ತಾರೆ. ಈ ಬಗ್ಗೆ ಇಲಾಖಾಧಿಕಾರಿಗಳು ಯಾವುದೇ ನಿಖರ ಮಾಹಿತಿ ನೀಡುವುದಿಲ್ಲ. ಸಂಬಂಧಪಟ್ಟ ಇಲಾಖೆ ಹಾಗೂ ಎ.ಸಿ. ಅವರಿಗೆ ಸ್ಥಾವರದ ವಿರುದ್ಧ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಿಡ್ಡೋಡಿ ಉಳಿಸಿ ಬಗ್ಗೆ ಹೋರಾಟ ತೀವ್ರ ಗೊಳಿಸುವುದು ಅನಿವಾರ್ಯವಾಗಿದೆ. ಅವಿಭಜಿತ ದಕ್ಷಿಣಕನ್ನಡ ಶಾಸಕ, ಸಂಸದ ಹಾಗೂ ಮುಖ್ಯ ಮಂತ್ರಿಗಳಿಗೆ ಸ್ಥಾವರ ಆಗದಂತೆ ಒತ್ತಾಯಪೂರ್ವಕ ಮನವಿ ಮಾಡಲೇಬೇಕಾಗಿದೆ. ಧಾರಣಾ ಸಾಮಾರ್ಥ್ಯ ಕುಗ್ಗಿರುವ ನಮ್ಮ ಅವಿಭಜಿತ ಜಿಲ್ಲೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಹಿರಿಯರು ಕಿರಿಯರು ಸೇರಿ ಜ್ಯಾತ್ಯಾತಿತ ಹಾಗೂ ರಾಜಕೀಯ ಮುಕ್ತ ಹೋರಾಟಕ್ಕೆ ಸಿದ್ದರಾಗಬೇಕು. ಇಲ್ಲದಿದ್ದರೆ ದಕ್ಷಿಣಕನ್ನಡ ಉಡುಪಿಜಿಲ್ಲೆಗಳು ಹಾಗೂ ಪಶ್ಚಿಮ ಘಟ್ಟಗಳು ಭೂಪಟಗಳಲ್ಲಿ ಮಾಯವಾಗಬಹುದು. ಮುಂದಿನ ದಿನಗಳಲ್ಲಿ “ಶಾಂತಿಗಾಗಿ ಕ್ರಾಂತಿ” “ರೈತರ ಚಿತ್ತ ಜಿಲ್ಲಾಧಿಕಾರಿಯತ್ತ ” ಶಾಂತಿಯುತ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಮಾತೃ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜ, ಸಂಚಾಲಕ ಕಿರಣ್ ಮಂಜನಬೈಲು, ಕಾರ್ಯದರ್ಶಿ ವಿನೋದರ ಸುವರ್ಣ, ಬಾಸ್ಕರ ದೇವಸ್ಯ, ಜಗನ್ನಾಥ ಶೆಟ್ಟಿ, ಕಲ್ಲಮುಂಡ್ಕೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಪೂವಪ್ಪ ಗೌಡ, ಶಾಂತಿ ಪ್ರಸಾದ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಜನಾರ್ಧನ ಗೌಡ, ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ಯುಗಪುರುಷದ ಭುವನಾಭಿರಾಮ ಉಡುಪ, ಜೊಸ್ಸಿ ಪಿಂಟೊ, ಜನಾರ್ಧನ ಕಿಲೆಂಜೂರು, ದೇವ ಪ್ರಸಾದ್ ಪುನರೂರು, ದೇವಿ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-140821308

Comments

comments

Comments are closed.

Read previous post:
Kinnigoli-140821307
ಅಭಿವೃದ್ಧಿಯ ಚಿಂತನೆಗಳನ್ನು ಮೂಡಿಸಬೇಕು

ಕಿನ್ನಿಗೋಳಿ: ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಸೇವಾ ಸಂಘಟನೆಗಳು ಬಲಗೊಳ್ಳುತ್ತವೆ. ಜನರಲ್ಲಿ ಅಭಿವೃದ್ಧಿಯ ಚಿಂತನೆಗಳನ್ನು ಮೂಡಿಸಿ ಬದಲಾವಣೆಯ ದಾರಿ ತೋರಿಸಬೇಕು ಎಂದು ರೋಟರಿ ಜಿಲ್ಲೆ ೩೧೮೦...

Close