ಮುಲ್ಕಿ ವಲಯ ಎಸ್.ಕೆ.ಪಿ.ಎ ಮಹಾಸಭೆ

ಕಿನ್ನಿಗೋಳಿ : ಅಸಂಘಟಿತರಾಗಿದ್ದು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದ ಛಾಯಗ್ರಾಹಕರು ಇಂದು ಸಂಘಟಿತರಾಗಿ ಅಭಿವೃದ್ದಿ ಪಥದಲ್ಲಿದ್ದಾರೆ. ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ‍್ಸ್ ಎಸೋಸೀಯೇಶನ್ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಯುಗಪುರುಷ ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ನಡೆದ ದ.ಕ ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ‍್ಸ್ ಎಸೋಸೀಯೇಶನ್ ಮುಲ್ಕಿ ವಲಯದ ಮಹಾ ಸಭೆಯಲ್ಲಿ ಮಾತನಾಡಿದರು.
ಸುಮಾರು 3000 ಸದಸ್ಯರನ್ನು ಒಳಗೊಂಡ ಎಸೋಸೀಯೇಶನ್ ಛಾಯಗ್ರಾಹಕರ ಧ್ಯೇಯೋದ್ದೇಶಗಳಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ವಿವಿದ್ದೋದೇಶ ಸಹಕಾರಿ ಬ್ಯಾಂಕ್ ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು.
ಈ ಸಂದರ್ಭ ಮೂಲ್ಕಿ ವಲಯದ 2013-14 ನೇ ಸಾಲಿನ ಅಧ್ಯಕ್ಷರಾಗಿ ನವೀನ್ ಕುಮಾರ್ ಕಟೀಲು ಹಾಗೂ ಕಾರ್ಯದರ್ಶಿಯಾಗಿ ಕೆ.ಬಿ. ಸುರೇಶ್ ಆಯ್ಕೆಯಾದರು.
ಮೂಲ್ಕಿ ವಲಯದ ಅಧ್ಯಕ್ಷ ರಫಾಯಲ್ ರೆಬೆಲ್ಲೋ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನವೀನ್ ರೈ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ, ಜಿಲ್ಲಾ ಸಮಿತಿಯ ಸದಸ್ಯರಾದ ಮಧುಕರ್, ನೋರ್ಬಟ್ ಕ್ರಾಸ್ತಾ, ದಯಾನಂದ, ರಿತೇಶ್, ಅರುಣ್ ಪಿಂಟೋ ಉಪಸ್ಥಿತರಿದ್ದರು.
ಮುಲ್ಕಿ ವಲಯ ಕಾರ್ಯದರ್ಶಿ ಯಶವಂತ ಐಕಳ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷ ಲಾಯ್ನೆಲ್ ಪಿಂಟೋ ವಂದಿಸಿದರು.

Kinnigoli-140821310

Comments

comments

Comments are closed.

Read previous post:
Kinnigoli-140821309
ತೋಕೂರು ಸೇತುಬಂಧ ಸಮಾರೋಪ

ಕಿನ್ನಿಗೋಳಿ : ವಿದ್ಯಾರ್ಥಿಗಳಿಗೆ ಸ್ವಉದ್ಯೋಗ ಕಲ್ಪಿಸುವಲ್ಲಿ ಬ್ಯಾಂಕ್‌ಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಉತ್ತಮ ತರಬೇತಿ ಪಡೆದು ಭವಿಷ್ಯದಲ್ಲಿ ಸ್ವಾವಲಂಬಿ ಬದುಕನ್ನು ಕಾಣಲು ಸಾಧ್ಯವಿದೆ. ಎಂದು ಮುಲ್ಕಿ ಸಿಂಡಿಕೇಟ್ ಬ್ಯಾಂಕ್...

Close