ಅಭಿವೃದ್ಧಿಯ ಚಿಂತನೆಗಳನ್ನು ಮೂಡಿಸಬೇಕು

ಕಿನ್ನಿಗೋಳಿ: ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಸೇವಾ ಸಂಘಟನೆಗಳು ಬಲಗೊಳ್ಳುತ್ತವೆ. ಜನರಲ್ಲಿ ಅಭಿವೃದ್ಧಿಯ ಚಿಂತನೆಗಳನ್ನು ಮೂಡಿಸಿ ಬದಲಾವಣೆಯ ದಾರಿ ತೋರಿಸಬೇಕು ಎಂದು ರೋಟರಿ ಜಿಲ್ಲೆ ೩೧೮೦ ರ ಜಿಲ್ಲಾ ಗವರ್ನರ್ ಎಸ್. ಗುರುರಾಜ್ ಹೇಳಿದರು. ಕಿನ್ನಿಗೋಳಿ ರೋಟರಿ ಕ್ಲಬ್‌ಗೆ ಸೋಮವಾರ ಅಧಿಕೃತ ಭೇಟಿ ನೀಡಿ, ಸಂಜೆ ಕಿನ್ನಿಗೋಳಿ ರಾಜಾಂಗಣ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೋ ಅಧ್ಯಕ್ಷತೆ ವಹಿಸಿದ್ದರು. ನೂತನ ಸದಸ್ಯರಾಗಿ ಶಿವಪ್ರಸಾದ್ ಅವರನ್ನು ಸೇರ್ಪಡೆಗೊಳಿಸಲಾಯಿತು. ರೋಟರಿ ಜಿಲ್ಲೆ 3180 ರ ವಲಯ 3 ರ ಸಹಾಯಕ ಗವರ್ನರ್ ಮಾಧವ ಸುವರ್ಣ ರೋಟರಿ ಮುಖವಾಣಿ ಸಿಂಚನ ಬಿಡುಗಡೆಗೊಳಿಸಿದರು. ವಲಯ ಸೇನಾನಿ ಎನ್.ಪಿ. ಶೆಟ್ಟಿ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ಪುಷ್ಪಾ ಗುರುರಾಜ್, ನಿಕಟಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೊಕಿಂ ಸಿಕ್ವೇರಾ ವರದಿ ನೀಡಿದರು, ನಿಯೋಜಿತ ಅಧ್ಯಕ್ಷ ವಿಲಿಯಂ ಸಿಕ್ವೇರಾ ವಂದಿಸಿದರು. ಶರತ್ ಶೆಟ್ಟಿ ಹಾಗೂ ಎಚ್. ಸತೀಶ್ಚಂದ್ರ ಹೆಗ್ಡೆ. ಕಾರ್ಯಕ್ರಮ ನಿರೂಪಿಸಿದರು.

Kinnigoli-140821303

Kinnigoli-140821304

Kinnigoli-140821305

Kinnigoli-140821306

Kinnigoli-140821307

Comments

comments

Comments are closed.

Read previous post:
ಮಂಗಳೂರು ವಿ.ವಿ. ಅಂತರ್ ಕಾಲೇಜು ಗುಡ್ಡಗಾಡು ಓಟ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜಿನಲ್ಲಿ ಸಪ್ಟೆಂಬರ್ 2 ಮತ್ತು 3ರಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟವನ್ನು ಆಗಸ್ಟ್ 23 ಮತ್ತು 24...

Close