ಉದ್ಯೋಗಾರ್ಥಿ ಆಗುವ ಬದಲು ಉದ್ಯಮಿ ಆಗಿರಿ

ಕಿನ್ನಿಗೋಳಿ: ಶೈಕ್ಷಣಿಕವಾಗಿ ತಾಂತ್ರಿಕ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣಕ್ಕೆ ಬಹಳಷ್ಟು ವ್ಯತ್ಯಾಸ ಇದೆ. ತಾಂತ್ರಿಕ ಶಿಕ್ಷಣದಲ್ಲಿ ಮಾನಸಿಕ ಸ್ಥೈರ್ಯದೊಂದಿಗೆ ದೈಹಿಕ ಕ್ಷಮತೆಯ ಅಗತ್ಯವಿದೆ. ಪಠ್ಯಕ್ಕಿಂತ ಪ್ರಾಯೋಗಿಕ ತರಬೇತಿ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು. ಉದ್ಯೋಗಾರ್ಥಿ ಆಗುವ ಬದಲು ಉದ್ಯೋಗ ನೀಡುವ ಉದ್ಯಮಿ ಆಗಿ ಬೆಳೆಯಲು ಪ್ರಯತ್ನಿಸಿರಿ ಎಂದು ನಿಟ್ಟೆ ವಿದ್ಯಾ ಸಂಸ್ಥೆಯ ಹಿರಿಯ ಅಧಿಕಾರಿ ಅರವಿಂದ ಹೆಗ್ಡೆ ಹೇಳಿದರು. ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ “ಸೇತುಬಂಧ” ಎರಡು ದಿನಗಳ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ವೈ.ಎನ್.ಸಾಲಿಯಾನ್ ಅಧ್ಯಕ್ಷತೆವಹಿಸಿದ್ದರು. ಪಕ್ಷಿಕೆರೆ ಸಂತ ಜೂಡರ ಧಾರ್ಮಿಕ ಕೇಂದ್ರದ ಧರ್ಮಗುರು ಆಂಡ್ರ್ಯೂ ಲಿಯೋ ಡಿ’ಸೋಜಾ ಮಾತನಾಡಿ ಭವಿಷ್ಯದ ಚಿಂತನೆ ಮಾಡುವ ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕರ್ತವ್ಯ ಶಿಕ್ಷಕರಲ್ಲಿದೆ, ಪೋಷಕರ ಹಾಗೂ ಶಿಕ್ಷಕರ ನಡುವಿನ ಸೇತುವೆ ಶಿಕ್ಷಣಾರ್ಥಿ ಆಗಿರುತ್ತಾನೆ ಎಂದರು. ಸಂಸ್ಥೆಯ ತರಬೇತಿ ಅಧಿಕಾರಿಗಳಾದ ರಘುರಾಮ ರಾವ್, ವಿಶ್ವನಾಥ್ ರಾವ್, ಹರೀಶ್ಚಂದ್ರ, ಲಕ್ಷ್ಮೀಕಾಂತ, ಗುರುರಾಜ್ ಭಟ್ ಹಾಜರಿದ್ದರು.

Kinnigoli-140821302

Comments

comments

Comments are closed.

Read previous post:
Kinnigoli-140821301
ಫಾ| ಸ್ಟ್ಯಾನ್ಲಿ ಆರ್. ಪಿರೇರಾ : ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ : ಧರ್ಮ ಬೋಧನೆಯೊಂದಿಗೆ ಸಮಾಜ ಸೇವೆ ಹಾಗೂ ಊರಿನ ಸರ್ವಾಂಗೀಣ ಪ್ರಗತಿಗೆ ತಮ್ಮನ್ನು ತೊಡಗಿಸಿ ಜನರ ಪ್ರೀತಿ ಪಾತ್ರರಾಗಿದ್ದ ಫಾ| ಸ್ಟ್ಯಾನ್ಲಿ ಆರ್. ಪಿರೇರಾ ರಂತ ಮಹಾತ್ಮರು...

Close