ಫಾ| ಸ್ಟ್ಯಾನ್ಲಿ ಆರ್. ಪಿರೇರಾ : ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ : ಧರ್ಮ ಬೋಧನೆಯೊಂದಿಗೆ ಸಮಾಜ ಸೇವೆ ಹಾಗೂ ಊರಿನ ಸರ್ವಾಂಗೀಣ ಪ್ರಗತಿಗೆ ತಮ್ಮನ್ನು ತೊಡಗಿಸಿ ಜನರ ಪ್ರೀತಿ ಪಾತ್ರರಾಗಿದ್ದ ಫಾ| ಸ್ಟ್ಯಾನ್ಲಿ ಆರ್. ಪಿರೇರಾ ರಂತ ಮಹಾತ್ಮರು ನಮಗೆ ಆದರ್ಶಪ್ರಾಯರು ಎಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಪಕ್ಷಿಕೆರೆ ಸಂತ ಜೂದರ ಚರ್ಚ್‌ನಲ್ಲಿ ಸ್ಥಾಪಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ಫಾ| ಸ್ಟ್ಯಾನ್ಲಿ ಆರ್. ಪಿರೇರಾ ಹಾಗೂ ಫಾ. ಮಾರ್ಕ್ ಡೇಸಾ ಅವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ| ಆಂಡ್ರ್ಯೋ ಲಿಯೋ ಡಿ’ಸೋಜ ಅವರು ಎಸ್. ಕೋಡಿ-ಪಕ್ಷಿಕೆರೆ- ಹಳೆಯಂಗಡಿ ರಸ್ತೆಗೆ “ಫಾ|ಸ್ಟ್ಯಾನ್ಲಿ ಆರ್. ಪಿರೇರಾ ಹೆಸರು ಇಡಬೇಕಾಗಿದೆ ಎಂಬ ಮನವಿಯನ್ನು ಸಾರ್ವಜನಿಕರ ಪರವಾಗಿ ಸಚಿವರಿಗೆ ನೀಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ , ವಿದ್ವಾನ್ ಪಂಜ ಭಾಸ್ಕರ ಭಟ್, ಸುರಗಿರಿ ದೇವಳದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ , ಪಕ್ಷಿಕೆರೆ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಕೆ. ಯು. ಮಹಮ್ಮದ್, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಾಪು ದಂಡತೀರ್ಥ ಕಾಲೇಜು ಪ್ರಿನ್ಸಿಪಾಲ್ ಅಲ್ಬನ್ ರೊಡ್ರಿಗಸ್ ಶಿರ್ವ, ಎಸ್. ಎಸ್. ಎಫ್, ಕಾರ್ಯದರ್ಶಿ ಪಿ. ಎಂ. ಎ ಮಹಮ್ಮದ್ ಆಶ್ರಫ್, ರಾಜೌ ಅಮ್ಜದಿ ಪಕ್ಷಿಕೆರೆ ಉಪಸ್ಥಿತರಿದ್ದರು.
ನೂತನ ಸಭಾಂಗಣದ ಶಂಕು ಸ್ಥಾಪನೆಯನ್ನು ಅಭಯಚಂದ್ರ ಜೈನ್ ನೆರವೇರಿಸಿದರು.
ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ| ಆಂಡ್ರ್ಯೂ ಲಿಯೋ ಡಿ’ಸೋಜ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪನ್ಯಾಸಕ ಜಯಾನಂದ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli-140821301

Comments

comments

Comments are closed.

Read previous post:
ಆಗಸ್ಟ್ 16 ರಂದು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ

ಕಿನ್ನಿಗೋಳಿ: ಕಾಳಿಕಾಂಬಾ ಮಹಿಳಾ ವೃಂದ ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಆಶ್ರಯದಲ್ಲಿ ಆರನೇ ವರ್ಷದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ಆಗಸ್ಟ್ ೧೬ ರಂದು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ...

Close