ತೋಕೂರು ಸೇತುಬಂಧ ಸಮಾರೋಪ

ಕಿನ್ನಿಗೋಳಿ : ವಿದ್ಯಾರ್ಥಿಗಳಿಗೆ ಸ್ವಉದ್ಯೋಗ ಕಲ್ಪಿಸುವಲ್ಲಿ ಬ್ಯಾಂಕ್‌ಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಉತ್ತಮ ತರಬೇತಿ ಪಡೆದು ಭವಿಷ್ಯದಲ್ಲಿ ಸ್ವಾವಲಂಬಿ ಬದುಕನ್ನು ಕಾಣಲು ಸಾಧ್ಯವಿದೆ. ಎಂದು ಮುಲ್ಕಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಎಮ್.ವೈ. ಹರೀಶ್ ಹೇಳಿದರು.
ತೋಕೂರು ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆಯ 2013-14ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಬುಧವಾರ ನಡೆದ ಸೇತುಬಂಧ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸೇತುಬಂಧ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದು ವಿದ್ಯಾರ್ಥಿನಿ ನವ್ಯಶ್ರೀ ತನ್ನ ಅನಿಸಿಕೆ ವ್ಯಕ್ತ ಪಡಿಸಿದರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು, ವಿಶ್ವನಾಥ್ ರಾವ್ ಸ್ವಾಗತಿಸಿದರು, ತರಬೇತಿ ಅಧಿಕಾರಿ ದಯಾನಂದ ಲಾಗ್ವಾಣ್‌ಕರ್ ಪ್ರಸ್ತಾವನೆಗೈದರು. ಸುರೇಶ್ ಎಸ್. ವಂದಿಸಿ ಲಕ್ಷ್ಮೀಕಾಂತ್ ನಿರೂಪಿಸಿದರು.

Kinnigoli-140821309

Comments

comments

Comments are closed.

Read previous post:
Kinnigoli-140821308
ನಿಡ್ಡೋಡಿ ಸ್ಥಾವರ ವಿರುದ್ಧ ಉಪಸಮಿತಿಗಳ ಜಂಟೀ ಸಭೆ

ಕಿನ್ನಿಗೋಳಿ: ಮಾತೃ ಭೂಮಿ ಸಂರಕ್ಷಣಾ ಸಮಿತಿ ಹಾಗೂ ನಿಡ್ಡೋಡಿ ಪರಿಸರದ ಗ್ರಾಮ ಪಂಚಾಯಿತಿಗಳ ನಿಡ್ಡೋಡಿ ಉಪಸಮಿತಿ ಪದಾಧಿಕಾರಿಗಳ ಸಭೆ ನಿಡ್ಡೋಡಿ ಬಿಲ್ಲವ ಸಂಘದಲ್ಲಿ ಭಾನುವಾರ ನಡೆಯಿತು. ಕಿನ್ನಿಗೋಳಿ ,...

Close