ಅಲ್ಲಲ್ಲಿ ಸ್ವಾತಂತ್ರೋತ್ಸವ

ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆ
ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೋ ಧ್ವಜಾರೋಹಣಗೈದರು. ಶಾಲಾ ಕಾರ್ಯದರ್ಶಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಸತೀಶ್ಚಂದ್ರ ಹೆಗ್ಡೆ, ಸುರೇಂದ್ರನಾಥ ಶೆಣೈ, ಮುಖ್ಯ ಶಿಕ್ಷಕ ಗಿಲ್ಬಟ್ ಡಿಸೋಜ, ಮತ್ತಿತರರು ಉಪಸ್ಥಿತರಿದ್ದರು.

ಕಮ್ಮಾಜೆ ಮೊರಾರ್ಜಿದೇಸಾಯಿ ವಸತಿ ಶಾಲೆ.
ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು ಧ್ವಜಾರೋಹಣಗೈದರು. ಮುಖ್ಯ ಶಿಕ್ಷಕ ಚಂದ್ರಶೇಖರ್, ಪೋಷಕ ಸಮಿತಿ ಅಧ್ಯಕ್ಷ ನಾಗರಾಜ ದೇವಾಡಿಗ ಖಜಾಂಜಿ ಗೋಪಮ್ಮ ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ಮಕ್ಕಳು ಸ್ವಚ್ಚತಾ ಅಂದೋಲನ ಮೂಲಕ ಶ್ರಮದಾನ ಮಾಡಿದರು.

15082013

 ಕೆ.ಐ.ಸಿ.ಟಿ. ಮತ್ತು ಎಂ.ಸಿ.ಟಿ.ಸಿ. 

ಕಿನ್ನಿಗೋಳಿ ಕೆ.ಐ.ಸಿ.ಟಿ. ಮತ್ತು ಎಂ.ಸಿ.ಟಿ.ಸಿ. ಕಂಪ್ಯೂಟರ್ ತರಬೇತಿ ಹಾಗೂ ತಾಂತ್ರಿಕ ತರಬೇತಿ ಕೆಂದ್ರದಲ್ಲಿ 67 ನೇ ಸ್ವಾತಂತ್ರೋತ್ಸವವನ್ನು ಸಂಸ್ಥೆಯ ವಠಾರದಲ್ಲಿ ಆಚರಿಸಲಾಯಿತು. ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶ್ಯಾಮಲ ಪಿ. ಹೆಗ್ಡೆ ಧ್ವಜಾರೋಹಣಗೈದರು. ಮುಲ್ಕಿ ಎಂ.ಎಚ್. ಅಬ್ಬಾಸ್ ಮೆಮೋರಿಯಲ್ ಎಜುಕೇಶನಲ್ ಟ್ರಸ್ಟ್ ಸದಸ್ಯರಾದ ಅನ್ಸಾರ್ ಎಮ್.ಎ. , ಸಂಸ್ಥೆಯ ಹಿತೈಷಿ ಪ್ರವೀಣ್ ವೈ. , ಪ್ರಿನ್ಸಿಪಾಲ್ ನವೀನ್ ವೈ. , ನಿರ್ದೇಶಕ ಹರ್ಷದ್ ಎಂ.ಎ. ಮತ್ತಿತರರು ಉಪಸ್ಥಿತರಿದ್ದರು.

ಮುಹಮ್ಮದೀಯ ಮದ್ರಸ ಗೊಳಿಜೋರ
ಕಿನ್ನಿಗೋಳಿ ಸಮೀಪದ ಮುಹಮ್ಮದೀಯ ಮದ್ರಸ ಗೊಳಿಜೋರ ವತಿಯಿಂದ ೬೭ನೇ ಸ್ವಾತಂತ್ರ್ಯೋತ್ಸವವನ್ನು ಮದ್ರಸದ ಆವರಣದಲ್ಲಿ ಆಚರಿಸಲಾಯಿತು. ಪುನರೂರು ಮಸ್ಜಿದ್ ಮುಖಂಡರಾದ ರಿಝ್ವಾನ್ ಅಹ್ಮದ್ ಧ್ವಜಾರೋಹಣಗೈದರು. ಪುನರೂರು ಜುಮ್ಮಾ ಮಸ್ಜಿದ್ ಖತೀಬ ಹಸನ್ ಸಖಾಫಿ ಸ್ವಾತಂತ್ರ್ಯದ ಕುರಿತು ಮಾತನಾಡಿದರು

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಪ್ರಿನ್ಸಿಪಾಲ್ ಪ್ರೊ. ಎಮ್. ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣಗೈದರು. ಉಪನ್ಯಾಸಕರಾದ ಸುರೇಶ್, ಡಾ| ಸುನೀತ, ಕೃಷ್ಣ ಕಾಂಚನ್ ಎನ್.ಎಸ್.ಎಸ್. ಯೋಜನಾಧಿಕಾರಿ ಕೇಶವ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
15Aug2013
Happy Independence Day – 2013

Happy Independence Day to all nammakinnigoli viewers 67ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ನಮ್ಮೆಲ್ಲ ಓದುಗರು, ಜಾಹೀರಾತುದಾರರು, ಅಭಿಮಾನಿಗಳಿಗೆ ಶುಭ ಹಾರೈಕೆಗಳು

Close