ಕಿರೆಂ ಕೊಂಕಣಿ ಭಾಷಾ ಮಾನ್ಯತಾ ದಿವಸ

ಕಿನ್ನಿಗೋಳಿ: ಭಾಷಾಭಿಮಾನವಿದ್ದಲ್ಲಿ ಭಾಷಾಭಿವೃದ್ಧಿ ಸಾಧ್ಯ. ಮುಂದಿನ ಪೀಳಿಗೆಗೆ ಕೊಂಕಣಿ ಭಾಷೆ ಉಳಿಸುವುದು ಸವಾಲಾಗಿದೆ. ಭಾಷೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಎಂದು
ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೋ ಹೇಳಿದರು.
ಕಿರೆಂ ಚರ್ಚ್‌ನ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಕಿರೆಂ ಚರ್ಚ್ ಸಭಾಂಗಣದಲ್ಲಿ ಗುರುವಾರ ನಡೆದ ಕೊಂಕಣಿ ಭಾಷಾ ಮಾನ್ಯತಾ ದಿವಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದುಬೈ ಮೆರಿಟ್ ಪ್ರೈಟ್ ಸಿಸ್ಟಮ್ ಕಂಪನಿಯ ಜೋಸೆಫ್ ಮಥಾಯಿಸ್, ಚರ್ಚ್ ಉಪಾಧ್ಯಕ್ಷ ರೋಬರ್ಟ್ ರೊಡ್ರಿಗಸ್ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಸಂಘಟನೆಯ ಪರವಾಗಿ ಧರ್ಮಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬರ್ಟನ್ ಸಿಕ್ವೇರ ವಂದಿಸಿದರು, ಅನಿತಾ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

KInnigoli-15081317

Comments

comments

Comments are closed.

Read previous post:
KInnigoli-15081316
ಮೂರುಕಾವೇರಿ ಉದ್ಯಾನವನ : ಶ್ರಮದಾನ

ಕಿನ್ನಿಗೋಳಿ: ಕಟೀಲು ದುರ್ಗಾಪರಮೇಶ್ವರಿ ಪದವಿ ಕಾಲೇಜು ಎನ್.ಎಸ್.ಎಸ್. ಹಾಗೂ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ಮೂರುಕಾವೇರಿ ರೋಟರಾಕ್ಟ್ ಉದ್ಯಾನವನದಲ್ಲಿ ಶ್ರಮದಾನ ನಡೆಯಿತು. ಕಟೀಲು ದುರ್ಗಾಪರಮೇಶ್ವರಿ ಪದವಿ ಕಾಲೇಜು ಪ್ರಿನ್ಸಿಪಾಲ್...

Close