ರಿತಿಕಾ ಪ್ರದರ್ಶಿಸಿದ ಸರಳ ಕೂಲರ್ ರಾಜ್ಯಮಟ್ಟಕ್ಕೆ

Narendra Kerekadu

ಮೂಲ್ಕಿ: ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನದ ಡಾ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾದ್ಯಮ ಫ್ರೌಢಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ರಿತಿಕಾ ಪ್ರದರ್ಶಿಸಿದ ಸರಳ ಕೂಲರ್ ವಿಜ್ಞಾನ ಮಾದರಿಯು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಮಂಗಳೂರಿನ ಪಿಲಿಕುಳದ ಶಿವರಾಮ ಕಾರಂತ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ರಿತಿಕಾಳು ತಯಾರಿಸಿದ ಕಡಿಮೆ ಬಜೆಟ್‌ನ ಸರಳ ಕೂಲರ್ ಗಮನ ಸೆಳೆದಿತ್ತು. ತೀರ್ಪುಗಾರರ ಪ್ರಶಂಸೆಗೆ ಒಳಗಾದ ಈ ಸರಳ ಕೂಲರ್ ರಾಜ್ಯ ಮಟ್ಟದಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆ ಆಗಿದೆ.
ರಿತಿಕಾ ಹಳೆಯಂಗಡಿಯ ಹರೀಶ್ ಕೋಟ್ಯಾನ್ ಮತ್ತು ಕುಸುಮರವರ ಮಗಳಾಗಿದ್ದು ಈಕೆಯ ಸಾಧನೆಗೆ ಶಾಲಾ ಪ್ರಾಂಶುಪಾಲೆ ಶ್ರೀಲತಾರಾವ್ ಹಾಗೂ ಸಹ ಶಿಕ್ಷಕರು, ಶಾಲಾ ಶಿಕ್ಷಕ ರಕ್ಷಕ ಸಂಘದವರು ಅಭಿನಂದಿಸಿದ್ದಾರೆ.

KInnigoli-15081320

 

Comments

comments

Comments are closed.

Read previous post:
KInnigoli-15081319
ಸುರಗಿರಿ : ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ

ಕಿನ್ನಿಗೋಳಿ : ಕ್ಯಾಪ್ಶನ್ : ಸುರಗಿರಿ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಅತ್ತೂರುಬೈಲು ವೆಂಕಟರಾಜ ಉಡುಪರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ನಡೆಯಿತು.

Close