ನಿಧನ : ಶಿಬರೂರು ಹಯಗ್ರೀವ ತಂತ್ರಿ(85ವ.)

HayagreevaTantri

ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೆಶ್ವರೀ ದೇಗುಲದ ತಂತ್ರಿಗಳಾದ ಶಿಬರೂರು ಹಯಗ್ರೀವ ತಂತ್ರಿ(85ವ.) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಕಟೀಲು ದೇಗುಲದಲ್ಲಿ ತಂತ್ರಿಗಳಾಗಿ ನಾಲ್ಕು ಬ್ರಹ್ಮಕಲಶಗಳನ್ನು ನೆರವೇರಿಸಿರುವ ಹಯಗ್ರೀವ ತಂತ್ರಿಯವರು ಶಿಮಂತೂರು, ಏಳಿಂಜೆ, ಕಲ್ಲಮುಂಡ್ಕೂರು, ಮಂಗಳೂರು ವೀರಭದ್ರ, ಹೊಯ್ಗೆಗುಡ್ಡೆ, ದೇಂದಡ್ಕ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ದೇಗುಲಗಳ, ಹತ್ತಾರು ದೈವಸ್ಥಾನಗಳ ತಂತ್ರಿಗಳಾಗಿ ಕಾರ‍್ಯನಿರ್ವಹಿಸುತ್ತಿದ್ದರು. ಪೇಜಾವರ ವಿಶ್ವೇಶತೀರ್ಥರಲ್ಲಿ ಸುಧಾ ಮಂಗಳ ಪಾಠ ಹೇಳಿಸಿಕೊಂಡ ಪ್ರಥಮ ಶಿಷ್ಯರಾಗಿದ್ದು,  ತಂತ್ರಿ ವರ್ಗದಲ್ಲಿ ಇವರಷ್ಟು ಚಂಡಿಕಾಹೋಮವನ್ನು ಮಾಡಿದವರು ಬೇರೆ ಯಾರೂ ಇದ್ದಂತಿಲ್ಲ. ಪುರೋಹಿತವರ್ಗದಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದ ಇವರು ಮನೆಯನ್ನೇ ಗುರುಕುಲವನ್ನಾಗಿಸಿ, ಹತ್ತಾರು ಶಿಷ್ಯರಿಗೆ ಪಾಠ ಹೇಳಿದವರು. ಹಯಗ್ರೀವ ತಂತ್ರಿಯವರು ಪಲಿಮಾರು ಮಠದ ಈಗಿನ ಯತಿಗಳ ಪೂರ್ವಾಶ್ರಮದ ತಂದೆಯಾಗಿದ್ದಾರೆ. ಪತ್ನಿ, ಪುತ್ರ ವೇದವ್ಯಾಸ ತಂತ್ರಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

 

Comments

comments

Comments are closed.

Read previous post:
KInnigoli-15081322
ಮೂಲ್ಕಿ: ಶ್ರೀ ವರಮಹಾಲಕ್ಷ್ಮೀ ಪೂಜೆ

hagyavan Sanil ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಜರುಗಿತು.

Close