ಸಹಬಾಳ್ವೆಯೇ ಸಮೃದ್ಧ ಸಮಾಜ : ಹೆನ್ನಾ

ಕಿನ್ನಿಗೋಳಿ : ಉಳ್ಳವರು ದುರ್ಬಲರಿಗೆ ಕೈಲಾದ ಸಹಾಯ ಮಾಡುವಂತಹ ಸಹಬಾಳ್ವೆಯ ಸಮೃದ್ಧ ಸಮಾಜ ನಿರ್ಮಾಣವಾದಲ್ಲಿ ಮಾನವೀಯತೆಗೆ ನಿಜವಾದ ಅರ್ಥ ಬರುತ್ತದೆ ಎಂದು ಭಾರತದ ಜನಜೀವನದ ಬಗ್ಗೆ ಅಧ್ಯಯನ ಮಾಡಲು ಬಂದ ಜರ್ಮನಿಯ ಸಮಾಜ ಸೇವಕಿ ಹನ್ನ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ಹಾಗೂ ರೋಟರ‍್ಯಾಕ್ಟ್ ಸಹಯೋಗದೊಂದಿಗೆ ಗುರುವಾರ ಬಲ್ಲಾಣ ಪ್ರೀತಿ ಸದನದ ಅನಾಥ ಮಕ್ಕಳೊಂದಿಗೆ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಸಂಸ್ಥೆಯ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಜರ್ಮನಿಯ ಸಮಾಜ ಸೇವಕಿ ಒಕ್ಟೋವಿಯಾ, ಕಟೀಲು ಹೈಸ್ಕೂಲು ಮುಖ್ಯ ಶಿಕ್ಷಕ ಸುರೇಶ್ ಭಟ್, ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ, ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಜೊಕಿಂ ಸಿಕ್ವೇರಾ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೋ ಸ್ವಾಗತಿಸಿದರು. ರೋಟರ‍್ಯಾಕ್ಟ್ ಅಧ್ಯಕ್ಷ ಪ್ರಣಿಲ್ ಹೆಗ್ಡೆ ವಂದಿಸಿದರು. ವಿಲಿಯಂ ಸ್ವಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli18081321

Comments

comments

Comments are closed.