ಕಟೀಲಿನಲ್ಲಿ ರಕ್ತದಾನ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ಫ್ರೌಡ ಶಾಲೆ, ಹಳೆ ವಿದ್ಯಾರ್ಥಿ ಸಂಘ, ಕಟೀಲು ಪ್ರಥಮ ದರ್ಜೆ ಕಾಲೇಜು ಎನ್. ಎಸ್. ಎಸ್. ಘಟಕ, ನಂದಿನಿ ಯುವಕ ವೃಂದ ಮಲ್ಲಿಗೆಯಂಗಡಿ, ಕೊಂಡೇಲ ತರುಣ ವೃಂದ, ಶ್ರೀ ರಾಮ ಯುವಕ ವೃಂದ ಗೋಳಿಜೋರ, ಐಕಳ ಪಾಂಪೈ ಕಾಲೇಜು ಎನ್‌ಸಿಸಿ ಭ್ರಾಮರೀ ಫ್ರೆಂಡ್ಸ್ ಕ್ಲಬ್ ಉಮ್ಮೆಟ್ಟು ಮಲ್ಲಿಗೆಯಂಗಡಿ, ಕಟೀಲ್ ಫ್ರೆಂಡ್ಸ್ ಕ್ಲಬ್, ಶ್ರೀ ಚೇತನಾ ಯುವಕ ಮಂಡಲ ಗಿಡಿಗೆರೆ, ಕಾರು, ರಿಕ್ಷಾ ಚಾಲಕ ಮಾಲಕರ ಸಂಘ, ವಿಜಯ ಯುವ ಸಂಗಮ ಎಕ್ಕಾರು, ಕಟೀಲ್ ಸ್ಪೋಟ್ಸ್ ಗೇಮ್ಸ್ ಕ್ಲಬ್, ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ, ಜೇಸಿಐ ಮುಂಡ್ಕೂರು ಭಾರ್ಗವ ಯಕ್ಷಗಾನ ಬಯಲಾಟ ಸಮಿತಿ ಕುಕ್ಕಟ್ಟೆ ಕೊಲ್ಲೂರು, ಯುವ ಶಕ್ತಿ ಉಲ್ಲಂಜೆ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಜಂಟೀ ಆಶ್ರಯದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಭಾನುವಾರ ಕಟೀಲು “ಸರಸ್ವತೀ ಸದನ ಕಟೀಲಿನಲ್ಲಿ” ನಡೆಯಿತು. ರಕ್ತದಾನ ಶಿಬಿರದಲ್ಲಿ 84ಮಂದಿ ರಕ್ತದಾನ ಮಾಡಿದರು.
ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಕಮಲ ಪ್ರಸಾದ ಆಸ್ರಣ್ಣ, ಬಜಪೆ ಇನ್ಸ್‌ಪೆಕ್ಟರ್ ದಿನಕರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ಕಟೀಲು ಫ್ರೌಢ ಶಾಲಾ ಮುಖ್ಯ ಶಿಕ್ಷಕ ಸುರೇಶ್ ಭಟ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಲೋಕಯ್ಯ, ಕೇಶವ ಕರ್ಕೇರ, ಐಕಳ ಪೊಂಪೈ ಕಾಲೇಜು ಎನ್.ಸಿ.ಸಿ ಅಧಿಕಾರಿ ಪುರುಷೋತ್ತಮ್ ಮತ್ತಿತರಿದ್ದರು.

Kinnigoli18081324

Comments

comments

Comments are closed.

Read previous post:
Kinnigoli18081323
ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗಿ ಸುಚರಿತ ಶೆಟ್ಟಿ ಆಯ್ಕೆ

ಕಿನ್ನಿಗೋಳಿ : ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗಿ ಸುಚರಿತ ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾದರು. ಶನಿವಾರ ಕಿನ್ನಿಗೊಳಿ ಯುಗಪುರುಷ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಹಿರಿಯ ಬಿಜೆಪಿ ನಾಯಕ,...

Close